ಮಡಿಕೇರಿ, ನ. ೨೭: ಮಡಿಕೇರಿ ನಗರಸಭಾ ವ್ಯಾಪ್ತಿಯ ಪುಟಾಣಿ ನಗರದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಬಳಿಯ ಮನೆ ಸನಿಹದಲ್ಲಿ ಅಪಾಯದ ಸ್ಥಿತಿಯಲ್ಲಿರುವ ಜಾಗದಲ್ಲಿ ರೂ. ೧.೮೦ ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಕಳಪೆಯಾಗದಂತೆ ಗಮನ ಹರಿಸುವ ನಿಟ್ಟಿನಲ್ಲಿ ವಾರ್ಡ್ ಸದಸ್ಯೆ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ವಾರ್ಡ್ ಪ್ರಮುಖರಾದ ಚಾರ್ವಿ, ರಮೇಶ್, ಗುತ್ತಿಗೆದಾರ ರವಿಕುಮಾರ್, ಮುರುಗನ್ ಹಾಜರಿದ್ದರು.