ವೀರಾಜಪೇಟೆ. ನ, ೨೭: ಕೇರಳ ಮತ್ತು ಕರ್ನಾಟಕ ರಾಜ್ಯ ಗಡಿಭಾಗವಾಗಿರುವ ಮಾಕುಟ್ಟ ಮೂಲಕ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸದೆ ಜನಸಾಮಾನ್ಯರಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ತೊಂದರೆ ನೀಡುತ್ತಿದೆ ಎಂದು ಅರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಮತ್ತು ಕೇರಳ ರಾಜ್ಯದ ಇರಿಟ್ಟಿ ಬ್ಲಾಕ್ ಡಿವೈಎಫ್‌ಐ ಸಂಘಟನೆ ವತಿಯಿಂದ ಗಡಿಯ ಉಭಯ ಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾಕುಟ್ಟ ಅರಣ್ಯ ತಪಾಸಣೆ ಕೇಂದ್ರ ಬಳಿ ಕೊಡಗು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಮಲಬಾರ್ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಕೊರೊನಾ ಹತೋಟಿಗೆ ಬಂದಿರುವ ಸಮಯದಲ್ಲಿಯೂ ಮಾಕುಟ್ಟ ಅಂತಾರಾಜ್ಯ ಹೆದ್ದಾರಿಯಲ್ಲಿ ಹಲವು ಬಗೆಯ ನಿರ್ಬಂಧಗಳನ್ನು ಹೇರಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಆರ್.ಟಿ.ಪಿ.ಸಿ.ಆರ್ ಕಡ್ಡಾಯ ಮಾಡಿದ್ದರಿಂದ ವ್ಯಾಪಾರಿಗಳಿಗೆ, ವಿದ್ಯಾರ್ಥಿಗಳಿಗೆ ತೀವ್ರ ಕಷ್ಟವಾಗಿದೆ. ಬೇರೆ ಜಿಲ್ಲೆಗೆ ಒಂದು ಕಾನೂನೂ, ಕೊಡಗಿನ ಗಡಿಗೆ ಮಾತ್ರ ಪ್ರತ್ಯೇಕ ಕಾನೂನು ಯಾಕೆ ಎಂದು ಪ್ರಶ್ನಿಸಿದ ಅವರು, ವ್ಯಾಕ್ಸಿನ್ ವಿತರಣೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದಾದರೆ ಗಡಿಯಲ್ಲಿ ನಿರ್ಬಂಧ ತೆರವು ಮಾಡಲು ಭಯ ಏಕೆ ಎಂದು ಕಿಡಿಕಾರಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಕುಟ್ಟ ರಸ್ತೆ ಹೋರಾಟ ಸಮಿತಿಯ ಸಂಚಾಲಕ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ.ಪೃಥ್ವಿನಾಥ್, ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಗಡಿ ಪ್ರದೇಶಗಳಿಂದ ಸಂಚಾರಕ್ಕೆ ಮುಕ್ತ ಮಾಡಿದೆ. ಆದರೆ, ಕೊಡಗು ಜಿಲ್ಲಾಡÀಳಿತ ಮಾತ್ರ ಆರ್.ಟಿ.ಪಿ.ಸಿ.ಆರ್ ವರದಿ ಕಡ್ಡಾಯಗೊಳಿಸಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ದೇಶದ ಯಾವುದೇ ಗಡಿಭಾಗದಲ್ಲಿರದ ಕಾನೂನು ಕೊಡಗಿನಲ್ಲಿ ಮಾತ್ರ ಹೇರಲು ಕಾರಣವೇನೂ ಎಂದು ಪ್ರಶ್ನಿಸಿದ ಅವರು, ಗಡಿಭಾಗದ ಜನರು ತುರ್ತು ಸಂದರ್ಭ ಹಾಗೂ ದಿನನಿತ್ಯದ ಕೆಲಸಕ್ಕಾಗಿ ಕೇರಳ ರಾಜ್ಯಕ್ಕೆ ತೆರಳುತ್ತಾರೆ. ಗಡಿಯಲ್ಲಿ ವಿಧಿಸಿರುವ ನಿರ್ಬಂಧದಿAದ ಇದೀಗ ವ್ಯಾಪಾರೋದ್ಯಮ ಸ್ಥಗಿತಗೊಂಡಿದೆ. ಎರಡು ಕೊರೊನಾ ನಿರೋಧಕ ಲಸಿಕೆ ಪಡೆದಿದ್ದರು ಆರ್.ಟಿ.ಪಿ.ಸಿ.ಆರ್ ವರದಿ ನೀಡಲು ಇಲ್ಲಿನ ಅಧಿಕಾರಿಗಳು ಒತ್ತಡ ಹೇರಿ ಪ್ರಯಾಣಿಕರನ್ನು ಹಿಂದಿರುಗುವAತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ.ಪಂ.ಸದಸ್ಯ ಮೊಹಮ್ಮದ್ ರಾಫಿ ಮಾತನಾಡಿ, ವಿಮಾನಯಾನ ಮತ್ತು ರೈಲು ಪ್ರಯಾಣಕ್ಕೆ ಅರ್.ಟಿ.ಪಿ.ಸಿ.ಆರ್ ವರದಿ ಕಡ್ಡಾಯವಿಲ್ಲ. ಆದರೆ, ಗಡಿ ಸಂಚಾರಕ್ಕೆ ವರದಿ ಕಡ್ಡಾಯವಾಗಿದೆ. ಬಡ ಪ್ರಯಾಣಿಕ ಕೋವಿಡ್ ವರದಿಗೆ ೫೦೦ ರೂ ತೆತ್ತು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕಣ್ಣೂರು ಡಿ.ಸಿ.ಸಿ ಸದಸ್ಯ ಮಟ್ಟಣಿ ವಿಜಯನ್ ಮಾತನಾಡಿ, ಕೇರಳ ರಾಜ್ಯದ ಕಣ್ಣೂರು, ತಲಚೇರಿ, ಇರಿಟ್ಟಿ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಾಕುಟ್ಟ ಗಡಿ ಮೂಲಕ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಈ ಭಾಗದ ಜನರು ವ್ಯಾಪಾರ ವಹಿವಾಟು, ವಿದ್ಯಾಭ್ಯಾಸ, ಚಿಕಿತ್ಸೆಗೆ ಕರ್ನಾಟಕ ರಾಜ್ಯದ ಮೈಸೂರು, ಕೊಡಗು ಮತ್ತು ಇತರ ಸ್ಥಳಗಳನ್ನು ಅವಲಂಭಿಸಿದ್ದಾರೆ ರಾಜ್ಯದಲ್ಲಿ ಸೋಂಕು ಇಳಿಮುಖ ಗೊಂಡರು ರಾಜ್ಯ ಸರ್ಕಾರವು ಗಡಿಯಲ್ಲಿ ವರದಿ ಕಡ್ಡಾಯಗೊಳಿಸಿ ಜನಸಾಮಾನ್ಯರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದೆ. ಕೇರಳ ಮತ್ತು ಕರ್ನಾಟಕ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಗಡಿ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ವೀರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್ ಕುಮಾರ್, ಇರಿಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಥೋಮಸ್, ಕಣ್ಣೂರು ಜಿಲ್ಲಾ ಉಪಾಧ್ಯಕ್ಷ ಹಂಸ ಅವರು ಮಾತನಾಡಿದರು.

ಪ್ರತಿಭಟನಾಕಾರರು ಮಾಕುಟ್ಟ ಅರಣ್ಯ ತಪಾಸಣೆ ಕೇಂದ್ರದಿAದ ಕೂಟುಪೊಳೆ ಸೇತುವೆಯ ಅನತಿ ದೂರದ ವರೆಗೆ ಪ್ರತಿಭಟನಾ ಜಾಥಾದಲ್ಲಿ ತೆರಳಿ, ಸರ್ಕಾರ ಮತ್ತು ಜಿಲ್ಲಾಡÀಳಿತ ವಿರುದ್ಧ ಘೋಷಣೆಗಳನ್ನು ಕೂಗಿದರು. ವೀರಾಜಪೇಟೆ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳಾದ ಹರೀಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯ ವೇಳೆ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಪ.ಪಂ ಸದಸ್ಯರಾದ ಅಗಸ್ಟಿನ್ ಬೆನ್ನಿ, ವರ್ಗೀಸ್, ನಗರ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಶಶಿಧರನ್, ಆರ್ಜಿ ಗ್ರಾ.ಪಂ ಸದಸ್ಯರಾದ ಉಪೇಂದ್ರ, ಅನೂಪ್, ರಜಾಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕೂಟುಪೊಳೆಯಲ್ಲಿ ಪ್ರತಿಭಟನೆ

ರಾಜ್ಯ ಸರ್ಕಾರ ಮತ್ತು ಕೊಡಗು ಜಿಲ್ಲಾಡಳಿತದ ಕ್ರಮದ ವಿರುದ್ಧ ಇರಿಟ್ಟಿ ಬ್ಲಾಕ್ ಡಿವೈಎಫ್‌ಐ ಸಂಘಟನೆ ವತಿಯಿಂದ ಕರ್ನಾಟಕ ಮತ್ತು ಕೇರಳ ರಾಜ್ಯವನ್ನು ಸಂಪರ್ಕಿಸುವ ಕೂಟುಪೊಳೆ ಎಂಬಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಸಂಘಟನೆಯ ಜಿಲ್ಲಾ ಕಾರ್ಯದÀರ್ಶಿ ಎಂ ಸಾಜನ್, ಕ್ರಮವನ್ನು ವಿರೋಧಿಸಿ ನಿಯಮ ಕೈಬಿಡುವಂತೆ ಆಗ್ರಹಿಸಿದರು. ಇರಿಟ್ಟಿ ಬ್ಲಾಕ್ ಕಾರ್ಯದÀರ್ಶೀ ಕೆ.ಜಿ. ದಿಲೀಪ್ ಮಾತನಾಡಿದರು. ಇರಿಟ್ಟಿ ಭಾಗದ ಡಿ.ವೈಎಫ್.ಐ ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ಸೇರಿದಂತೆ ಇನ್ನಿತರರು ಹಾಜರಿದ್ದರು.

-ಉಷಾ ಪ್ರೀತಂ / ಕಿಶೋರ್ ಶೆಟ್ಟಿ