ಮಡಿಕೇರಿ, ನ. ೨೭: ಮಡಿಕೇರಿ ತಾಲೂಕಿನಲ್ಲಿ ೨೦೨೧-೨೨ನೇ ಸಾಲಿನಲ್ಲಿ ಪ್ರಕೃತಿ ವಿಕೋಪದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಪ್ರದೇಶದ ಬಗ್ಗೆ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯವನ್ನು ತಾ. ೨೬ ರಂದು ನಡೆಸಲಾಗಿದ್ದು, ಮಡಿಕೇರಿ ತಾಲೂಕಿನ ಹೋಬಳಿಗಳಲ್ಲಿ ಬೆಳೆನಷ್ಟ ಶೇ. ೩೩ಕ್ಕಿಂತ ಹೆಚ್ಚು ಹಾನಿಯಾಗಿರುವ ಮತ್ತೆ ಕೆಲವು ಗ್ರಾಮಗಳನ್ನು ಪರಿಹಾರ ವ್ಯಾಪ್ತಿಗೆ ಸೇರಿಸಲಾಗಿದೆ.

ನಾಪೋಕ್ಲು ಹೋಬಳಿಯ ನಾಪೋಕ್ಲು, ಕೊಳಕೇರಿ, ಬೇತು, ಪಾಲೂರು, ಬಲ್ಲಮಾವಟಿ, ಪೇರೂರು, ದೊಡ್ಡಪುಲಿಕೋಟು, ಎಮ್ಮೆಮಾಡು, ನೆಲಜಿ, ಅರಪಟ್ಟು, ಕರಡ, ಪೊದವಾಡ, ಬಲಮುರಿ, ಕಿರುಂದಾಡು, ಕೈಕಾಡು, ಬಾವಲಿ, ಕೊಣಂಜಗೇರಿ, ನರಿಯದಂಡ, ಕೋಕೇರಿ ಮತ್ತು ಕುಂಜಿಲ (ಕಕ್ಕಬ್ಬೆ) ಗ್ರಾಮಗಳು ಸೇರ್ಪಡೆಯಾಗಿವೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ. ಈ ಗ್ರಾಮ ವ್ಯಾಪ್ತಿಯವರು ಅರ್ಜಿ ಸಲ್ಲಿಸಬಹುದಾಗಿದೆ.