ಪೊನ್ನಂಪೇಟೆ, ನ. ೨೭: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಪೊನ್ನಂಪೇಟೆ ವಲಯದ ೫ ಕ್ಲಸ್ಟರ್‌ಗಳ ತಾಲೂಕು ಮಟ್ಟದ ಮುಖ್ಯ ಶಿಕ್ಷಕರ ಸಭೆ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ೮ನೇ ತರಗತಿ ಮತ್ತು ೧೦ನೇ ತರಗತಿ ಎನ್.ಎನ್.ಎಂ.ಎಸ್., ಎನ್.ಟಿ.ಎಸ್. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

೫ನೇ ತರಗತಿ ವಿದ್ಯಾರ್ಥಿಗಳು ನವೋದಯ ಪರೀಕ್ಷೆಗೆ ಅರ್ಜಿ ಹಾಕುವ ಬಗ್ಗೆ, ಪೋಷಕರು ಕೋವಿಡ್-೧೯ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವ ಬಗ್ಗೆ, ಇ.ಎಲ್.ಸಿ. ಶಾಲೆಗಳ ಬಗ್ಗೆ ಚರ್ಚೆ ಮಾಡಲಾಯಿತು.

೨೦೨೦-೨೧ನೇ ಸಾಲಿನ ಸಾರಿಗೆ ಭತ್ಯೆ ವಿತರಣೆ, ಸಿವಿಲ್ ಕಾಮಗಾರಿ ಬಗ್ಗೆ ೨೦೨೧-೨೨ನೇ ಸಾಲಿನ ಕಲಿಕಾ ಪೂರಕ ಚಟುವಟಿಕೆಗಳ ಆಯೋಜನೆ ಬಗ್ಗೆ ತಿಳಿಸಲಾಯಿತು.

ಗ್ರಂಥಾಲಯ ಅನುದಾನ ವಿವರ, ವಲಸೆ ಮಕ್ಕಳ ವಿವರ, ದಿನಾಚರಣೆಗಳ ಬಗ್ಗೆ, ನಿಷ್ಠಾ ತರಬೇತಿ, ಸರ್ವ ಶಿಕ್ಷಣ ಕರ್ನಾಟಕ ಅನುದಾನ ಬಳಕೆ, ಶಾಲಾ ಸಿದ್ಧಿ, ಸಿಸಿಇ ಮೌಲ್ಯಮಾಪನ ಬಳಕೆ, ದಾಖಲೆಗಳ ನಿರ್ವಹಣೆ, ಅಂಗವಿಕಲ ಮಕ್ಕಳ ಬಗ್ಗೆ ಮಾಹಿತಿ ನೀಡಿ ಚರ್ಚೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ಬಿಆರ್‌ಪಿಗಳಾದ ಬಿ.ಪಿ. ಉತ್ತಪ್ಪ, ಕೆ.ಸಿ. ಗೀತಾಂಜಲಿ, ಜೈಸಿ ಜೋಸೆಫ್, ಟಿ.ಕೆ. ವಾಮನ, ಶಿಕ್ಷಣ ಸಂಯೋಜಕಿ ಕೆ.ಪಿ. ವಿಶಾಲಾಕ್ಷಮ್ಮ, ಬಿಐಇಆರ್‌ಟಿಗಳಾದ ಎಂ.ಕೆ. ಅಜಿತ, ಕೇಶವ ಮೂರ್ತಿ, ಸಿಆರ್‌ಪಿಗಳಾದ ತಿರುನೆಲ್ಲಿಮಡ ಜೀವನ್, ಎನ್.ಆರ್. ರವಿ, ಜ್ಯೋತೀಶ್ವರಿ, ಪುಷ್ಪ, ಚಿಕ್ಕದೇವಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್, ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಪೊನ್ನಂಪೇಟೆ, ಬಾಳೆಲೆ, ಮಾಯಮುಡಿ, ತಿತಿಮತಿ ಹಾಗೂ ಗೋಣಿಕೊಪ್ಪ ಕ್ಲಸ್ಟರಿನ ಮುಖ್ಯ ಶಿಕ್ಷಕರು ಸಭೆಯಲ್ಲಿ ಹಾಜರಿದ್ದರು.