ಮಡಿಕೇರಿ, ನ. ೨೬: ಜಿಲ್ಲೆಯ ಟಿ. ಶೆಟ್ಟಿಗೇರಿ ಗ್ರಾಮದ

ಹಿರಿಯ ಹಾಕಿಪಟು ಬಾಚರಣಿಯಂಡ ಎ. ನಾಣಯ್ಯ (ನಿವೃತ್ತ ಉಪಾಧ್ಯಾಯ-೯೫) ಅವರು ತಾ. ೨೬ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೨೭ರಂದು (ಇಂದು) ೨ ಗಂಟೆಗೆ ಮೃತರ ಸ್ವಗ್ರಾಮದಲ್ಲಿ ನಡೆಯಲಿದೆ.

ಮೃತರು ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರು ಹಾಕಿಯಲ್ಲಿ ಕೂರ್ಗ್ ಇಲೆವೆನ್ ತಂಡದ ಮಾಜಿ ನಾಯಕರಾಗಿ ಹಾಗೂ ಜಿಲ್ಲೆಯ ಹಲವಷ್ಟು ಪ್ರತಿಭೆಗಳಿಗೆ ತರಬೇತಿಯನ್ನು ನೀಡಿದ್ದರು. ಕೊಡವ ಕೌಟುಂಬಿಕ ಹಾಕಿಯಲ್ಲೂ ವಿಶೇಷ ಗಮನ ಸೆಳೆದಿದ್ದರು.