ಮಡಿಕೇರಿ, ನ. ೨೬: ಬೆಳೆಹಾನಿ ಪರಿಹಾರಕ್ಕೆ ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮಗಳನ್ನು ಸೇರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಡಗದಾಳು, ಇಬ್ನಿವಳವಾಡಿ ಗ್ರಾಮ ವ್ಯಾಪ್ತಿಯಲ್ಲಿ ಈವರೆಗೆ ಅಂದಾಜು ಸುಮಾರು ೧೪೦ ಇಂಚು ಮಳೆಯಾಗಿದ್ದು, ಕಾಫಿ, ಕರಿಮೆಣಸು, ಅಡಿಕೆ ಬೆಳೆಗಳು ಕೊಳೆತು ಶೇ.೪೦ರಷ್ಟು ನಷ್ಟ ಅನುಭವಿಸಿರುತ್ತೇವೆ. ಆದರೆ ಸಮೀಕ್ಷಾಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡದೆ ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರನ್ನು ಬೆಳೆ ಹಾನಿ ಪರಿಹಾರದಿಂದ ವಂಚಿತರನ್ನಾಗಿ ಮಾಡಿದ್ದಾರೆ. ಆದುದರಿಂದ ಗ್ರಾಮ ವ್ಯಾಪ್ತಿಯ ರೈತರನ್ನು ಬೆಳೆ ಪರಿಹಾರ ಪಟ್ಟಿಗೆ ಸೇರಿಸಿ ರೈತರನ್ನು ಸಂಕಷ್ಟದಿAದ ಪಾರು ಮಾಡಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಗ್ರಾಮಸ್ಥರಾದ ನಂದಿನೆರವAಡ ರವಿಬಸಪ್ಪ, ಪೊನ್ನಚೆಟ್ಟೀರ ಮಧು, ಅಚ್ಚಯ್ಯ, ಎಸ್. ಬೋಪಣ್ಣ, ಕಂಬಯ್ಯ ಹಾಗೂ ಗ್ರಾಮಸ್ಥರು ಇದ್ದರು.