ಮಡಿಕೇರಿ, ನ. ೨೬ : ರಾಜಾ ಸೀಟು ಉದ್ಯಾನ ವನವನ್ನು ‘ಗ್ರೇಟರ್ ರಾಜಸೀಟು’ ಆಗಿ ಅಭಿವೃದ್ಧಿ ಪಡಿ ಸುವ ಬಗ್ಗೆ ಜಿಲ್ಲಾಧಿ ಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆ ಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ನಗರದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಸಭಾಂಗ ಣದಲ್ಲಿ ರಾಜಸೀಟು ಅಭಿವೃದ್ಧಿ ಸಂಬAಧಿಸಿದAತೆ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.

ರಾಜಾಸೀಟು ಉದ್ಯಾನವನ ವ್ಯಾಪ್ತಿಗೆ ರೈಲ್ವೆ ಟ್ರಾö್ಯಕ್ ಸೇರ್ಪಡೆಯಾಗಿದ್ದು, ಈ ಹಿನ್ನೆಲೆ ರಾಜಾಸೀಟು ಉದ್ಯಾನವನ್ನು ಗ್ರೇಟರ್ ರಾಜಾಸೀಟು ಆಗಿ ಅಭಿವೃದ್ಧಿ ಪಡಿಸಲು ನೀಲನಕ್ಷೆ ತಯಾರಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಪುಟಾಣಿ ರೈಲು ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು, ಮ್ಯೂಸಿಕಲ್ ಫೌಂಟೈನ್ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಇದ್ದು, ಕೂಡಲೇ ಸರಿಪಡಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು. ಕೂರ್ಗ್ ವಿಲೇಜ್ ಈಗಾಗಲೇ ಉದ್ಘಾಟನೆ ಯಾಗಿದ್ದು, ತಕ್ಷಣವೇ ಕಾರ್ಯಾರಂಭವಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ರಾಜರ ಗದ್ದುಗೆ, ನೆಹರು ಮಂಟಪ ನಿರ್ವಹಣೆ, ರಾಜರ ಗದ್ದುಗೆ ಗೇಟಿನ ಬಳಿ ಹೈಮಾಸ್ಟ್ ಲೈಟ್ ಅಳವಡಿಸುವುದು ಮತ್ತಿತರ ಬಗ್ಗೆ ಚರ್ಚಿಸಲಾಯಿತು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಅವರು ರಾಜಾಸೀಟು ಅಭಿವೃದ್ಧಿ ಸಂಬAಧ ತೋಟಗಾರಿಕೆ ಇಲಾಖೆಯಿಂದ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಡಿಸೆಂಬರ್, ೨೫ ರ ಕ್ರಿಸ್‌ಮಸ್ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಕಾಫಿ ಮಂಡಳಿ ಸಹಕಾರದಲ್ಲಿ ‘ಕಾಫಿ ಮೇಳ’ ಆಯೋ ಜಿಸುವುದು, ಹಾಗೆ ಯೇ ರಜೆ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.

ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಕಾಫಿ ಮಂಡಳಿ ಉಪ ನಿರ್ದೇಶಕ ಶಿವಕುಮಾರ್ ಸ್ವಾಮಿ, ಪಿಡಬ್ಲೂö್ಯಇ ಎಇಇ ಶಿವರಾಮ್, ಹರ್ಷ, ಪೌರಾಯುಕ್ತ ರಾಮದಾಸ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಸುರೇಶ್ ಭಟ್ ಇತರರು ಇದ್ದರು.