ಕಣಿವೆ, ನ. ೨೬: ಕುಶಾಲನಗರದ ನಾಢಪ್ರಭು ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಹತ್ತು ಮಂದಿ ನಿರ್ದೇಶಕರ ಪೈಕಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಏಳು ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ಸೋಮವಾರ ನಡೆಯಿತು.
ನೂತನ ನಿರ್ದೇಶಕರಾಗಿ ಎಂ.ಕೆ. ದಿನೇಶ್ (೩೪೯ ಮತಗಳು) ಜಿ.ಬಿ. ಜಗದೀಶ್ (೩೪೨) ಸಿ.ವಿ. ನಾಗೇಶ್
( ೩೨೮) ಪ್ರಕಾಶ್ (೨೮೫) ಎಂ.ಡಿ. ರವಿ (೨೮೪) ರಾಜು ಕೂಡಿಗೆ (೨೯೨) ಕೂಡ್ಲೂರು ಹೇಮಂತಕುಮಾರ್ (೨೮೦) ಎಂಬವರು ಚುನಾಯಿತರಾಗಿದ್ದಾರೆ. ಹಾಗೆಯೇ ಕಸ್ತೂರಿ ಮಹೇಶ್, ರೇಖಾ ಹಾಗೂ ರಮೇಶ್ ಎಂಬವರು ಅವಿರೋಧ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಮೋಹನ ಕುಮಾರ್ ಕಾರ್ಯನಿರ್ವಹಿಸಿದರು ಎಂದು ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ತಿಳಿಸಿದ್ದಾರೆ.