ಕೂಡಿಗೆ, ನ. ೨೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಶಿನಗುಪ್ಪೆಯ ಯೂತ್ ಫ್ರೆಂಡ್ಸ್ ಮತ್ತು ಶ್ರೀ ಗಣಪತಿ ಸೇವಾ ಸಮಿತಿಯ ವತಿಯಿಂದ ಹುತ್ತರಿ ಹಬ್ಬದ ಪ್ರಯುಕ್ತ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಅರಿಶಿನಗುಪ್ಪೆ ಎ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿ ಹಾಗೂ ನಗದನ್ನು ಗೆದ್ದಿದೆ.

ದ್ವಿತೀಯ ಸ್ಥಾನವನ್ನು ಹೆಬ್ಬಾಲೆ ತಂಡ, ತೃತೀಯ ಸ್ಥಾನವನ್ನು ಬ್ಯಾಡಗೊಟ್ಟ ತಂಡ ಪಡೆದುಕೊಂಡಿತು. ಪಂದ್ಯಾವಳಿಗೆ ಸಿದ್ದಲಿಂಗಪುರದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಗುರುಗಳಾದ ಶ್ರೀ ರಾಜೇಶ್ ನಾಥ ಶುಭ ಕೋರಿದರು.

ಬಹುಮಾನ ವಿತರಣೆಯನ್ನು ಉದ್ಯಮಿ ನಾಪಂಡ ಮುತ್ತಪ್ಪ ನೆರವೇರಿಸಿದರು. ತೊರೆನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬೇಬಿ, ಸದಸ್ಯ ದೇವರಾಜ್, ಉದ್ಯಮಿ ಯೂನಿಸ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.