ವೀರಾಜಪೇಟೆ, ನ. ೨೬: ಕಳೆದ ಕೆಲವು ವರ್ಷಗಳಿಂದ ಕೇರಳ-ಕರ್ನಾಟಕ ಹೆದ್ದಾರಿಗೆ ಭಾರೀ ಮಳೆಯೇ ಕಂಟಕಪ್ರಾಯವಾಗಿತ್ತು. ೨೦೧೮ರಲ್ಲಿ ಈ ಅಂತಾರಾಜ್ಯ ಹೆದ್ದಾರಿಯಲ್ಲಿ ಸುಮಾರು ನಲವತ್ತಕ್ಕೂ ಅಧಿಕ ಕಡೆ ಭೂಕುಸಿತವಾಗಿ, ಓರ್ವ ವ್ಯಕ್ತಿಯ ಸಾವಾಗಿ ಸುಮಾರು ತಿಂಗಳುಗಟ್ಟಲೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ೨೦೧೮ ಜೂನ್ ೧೨ ರಲ್ಲಿ ಭಾರೀ ವಾಹನಗಳಿಗೆ ಸಂಚಾರ ನಿಷೇಧ ಮಾಡಲಾಗಿತ್ತು. ಸುಮಾರು ಹದಿನಾರು ತಿಂಗಳುಗಳ ಕಾಲ ವಾಹನಗಳಿಗೆ ಸಂಚಾರಕ್ಕೆ ಅವಕಾಶವೇ ಇರಲಿಲ್ಲ.

ಆದರೀಗ ಕೊರೊನಾ ಸೋಂಕು ಕೇರಳದಲ್ಲಿ ಹೆಚ್ಚಾಗಿದ್ದ ಕಾರಣ ಇಡೀ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆ ಕೇರಳ ಮತ್ತು ಕರ್ನಾಟಕವನ್ನು ಸಂಧಿಸುವ ಕೊಣನೂರು-ಮಾಕುಟ್ಟ ಅಂತಾರಾಜ್ಯ ಹೆದ್ದಾರಿಯನ್ನು ಕಳೆದ ಐದಾರು ತಿಂಗಳಿನಿAದ ಹಲವು ನಿರ್ಬಂಧಗಳ ನಡುವೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ವೀರಾಜಪೇಟೆ ಹಾಗೂ ಪೊನ್ನಂಪೇಟೆ ಕೊಡಗಿನ ಗಡಿ ತಾಲೂಕುಗಳಾದ ಕಾರಣ ಇಲ್ಲಿನ ಜನಜೀವನ ಕೇರಳದ ಮೇಲೆ ಆಶ್ರಯಿಸಿದೆ. ವೈದ್ಯಕೀಯ ಚಿಕಿತ್ಸೆ, ಸಂಬAಧಿಗಳು, ವ್ಯಾಪಾರ ಇತ್ಯಾದಿ ವಿಚಾರಗಳಲ್ಲಿ ಕೇರಳ ರಾಜ್ಯವನ್ನು ಇಲ್ಲಿನ ಜನರು ಅವಲಂಭಿಸಿದ್ದಾರೆ. ಅಂತೆಯೇ ಕೇರಳ ರಾಜ್ಯವೂ ಶಿಕ್ಷಣ, ತರಕಾರಿ, ಹಲವು ಬಗೆಯ ಸರಕುಗಳಿಗಾಗಿ ಕರ್ನಾಟಕವನ್ನೇ ನಂಬಿದೆ.

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಕೇರಳದಲ್ಲಿ ಅತೀಹೆಚ್ಚು ಕೊರೊನಾ ಪ್ರಕರಣಗಳು ಇದ್ದ ಕಾರಣ ಕೇರಳದಿಂದ ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ವರದಿ ತರಬೇಕು ಎಂಬ ನಿಯಮ ವನ್ನು ಕರ್ನಾಟಕ ಸರಕಾರ ಜಾರಿಗೊಳಿಸಿತು. ಅದು ಕೂಡಾ ೭೨ ಘಂಟೆಗಳ ಒಳಗಿನ ವರದಿಯಾಗಿ ರಬೇಕು ಎನ್ನುವ ಕಟ್ಟುನಿಟ್ಟಿನ ನಿರ್ದೇಶನವನ್ನು ಹೇರಿತು. ಈ ನಿರ್ಧಾರ ಸೋಂಕು ತಡೆಯುವಲ್ಲಿ ರಾಜ್ಯವನ್ನು, ಕೊಡಗು ಜಿಲ್ಲೆಯನ್ನು ಕೊರೊನಾ ಸೋಂಕು ಹರಡುವುದರಿಂದ ರಕ್ಷಿಸುವಲ್ಲಿ ಅತ್ಯಂತ ಯಶಸ್ವಿಯುತ ನಿರ್ಧಾರವೂ ಆಗಿತ್ತು. ಆದರೀಗ ಇಡೀ ದೇಶದಲ್ಲಿ ಎಲ್ಲಾ ಕಡೆಯೂ ನಿರ್ಬಂಧಗಳು ಸಡಿಲಿಕೆ ಯಾಗಿವೆ. ಎಂದಿನAತೆ ಜನಜೀವನ ಸಹಜತೆಯತ್ತ ಮುಖ ಮಾಡುತ್ತಿದೆ.

ಆದರೆ ಕರ್ನಾಟಕ ಮತ್ತು ಕೇರಳದ ಅಂತಾರಾಜ್ಯ ಗಡಿಯಲ್ಲಿ ಕರ್ನಾಟಕ ಸರ್ಕಾರ ವಿಧಿಸಿದ್ದ ಈ ನಿರ್ಬಂಧ ಮಾತ್ರ ಸಡಿಲವಾಗುತ್ತಿಲ್ಲ. ಕೇರಳಕ್ಕೆ ಕೊಡಗಿನಿಂದ ಕಾಫಿ, ಮೆಣಸು, ಭತ್ತ, ತರಕಾರಿ, ಧವಸಧಾನ್ಯಗಳು ಹೋಗುತ್ತಿದ್ದವು. ಕೇರಳದಿಂದ ಪ್ಲೆöÊವುಡ್, ಹಸಿ ಮತ್ತು ಒಣಗಿದ ಮೀನು, ಕೊಬ್ಬರಿ, ರಬ್ಬರ್, ಗೇರು ಬೀಜ, ಮರ, ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಕಲ್ಲು, ಜಲ್ಲಿ ರಾಜ್ಯಕ್ಕೆ ಬರುತ್ತಿದ್ದವು. ಇವೆಲ್ಲದ್ದಕ್ಕೂ ಕೊರೊನಾ ಬಂದ ಬಳಿಕ ಸಂಕಷ್ಟ ಎದುರಾಗಿದೆ. ಪ್ರತಿಬಾರಿ ಕೇರಳದಿಂದ ಕರ್ನಾಟಕಕ್ಕೆ ಸರಕು ಬರುವಾಗ ಘಂಟೆಗಟ್ಟಲೆ ಸರತಿಸಾಲಿನಲ್ಲಿ ಚಾಲಕರು ಕಾಯ್ದು ಸುಸ್ತಾಗಬೇಕಾದ ಪರಿಸ್ಥಿತಿ ತಿಂಗಳುಗಳಿAದ ಇದೆ.

ಗಡಿಯಲ್ಲಿ ಈ ರೀತಿ ನಿರ್ಬಂಧ ಹೇರಿದ ಬಳಿಕ ಕೇರಳ ಮತ್ತು ಕೊಡಗಿನ ನಡುವೆ ವ್ಯಾಪಾರ ವಹಿವಾಟು, ಮದುವೆ ಮಾಡಲು ಗಂಡು ಹೆಣ್ಣು ಕೊಟ್ಟು ತರುವುದು ಇವೆಲ್ಲದರ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿದೆ. ಕಣ್ಣೂರು ವಿಮಾನ ನಿಲ್ದಾಣಕ್ಕೆ ಹೋಗ ಬಯಸು ವವರಿಗೂ ಈ ದಾರಿ ಮುಚ್ಚಿಹೋದಂತಾಗಿದೆ.

ಆಸ್ಪತ್ರೆಗೆ ಹೋಗುವವರು, ಸಾವು, ನೋವು ಕಷ್ಟ-ಸುಖ, ದೇವಾಲಯ ಭೇಟಿ ಎಂದು ಕೇರಳಕ್ಕೆ ಹೋಗಬೇಕೆಂದರೆ ಅವರ ಪಾಡು ಹೇಳತೀರದಾಗಿದೆ. ರಸ್ತೆ ಬಂದ್ ಆಗಿದ್ದರಿಂದ ವೀರಾಜಪೇಟೆಯ ವ್ಯಾಪಾರ ವಹಿವಾಟಿಗೆ ಗರಬಡಿದಂತಾಗಿದೆ. ಸಾಧಾರಣವಾಗಿ ವೀರಾಜಪೇಟೆಯ ಮುಕ್ಕಾಲು ಭಾಗ ವರ್ತಕರು ಕೇರಳದವರು. ಹೆಚ್ಚಿನ ವಹಿವಾಟು ಕೇರಳ ಮತ್ತು ವೀರಾಜಪೇಟೆಯ ನಡುವೆ ನಡೆಯುತ್ತದೆ. ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರೂ ಪ್ರತಿಬಾರಿ ಈ ಆರ್.ಟಿ.ಪಿ.ಸಿ.ಆರ್. ತರಬೇಕಾದ ಅನಿವಾರ್ಯತೆಗೆ ಸಾಕಾದ ವರ್ತಕರು ವ್ಯಾಪಾರವೇ ಬೇಡ ಎನ್ನುವಷ್ಟು ಜಿಗುಪ್ಸಿತರಾಗಿರುವುದಂತೂ ಸತ್ಯ. ಅಲ್ಲದೇ ದಿನನಿತ್ಯ ಇಲ್ಲಿನ ಜನರು ಅವಲಂಬಿತವಾಗಿದ್ದ ಅನೇಕ ಅಗತ್ಯವಸ್ತುಗಳು ಅವರ ಕೈ ಸೇರುತ್ತಿಲ್ಲ.

ಶುಭ ಸಮಾರಂಭಗಳಿಗೂ ಹಿನ್ನೆಡೆ

ಕೇರಳದಲ್ಲಿ ವೈವಾಹಿಕ ಸಂಬAಧ ಹುಡುಕುವವರು, ಮದುವೆ ಮಾಡುವವರು, ಬಂಧುಗಳ ಮದುವೆಗೆ ಹೋಗುವವರು, ಆಸ್ಪತ್ರೆಯ ಚೆಕಪ್‌ಗಳಿಗೆ ತೆರಳುವವರು ಎಲ್ಲರಿಗೂ ತೀವ್ರ ಸಂಕಷ್ಟವಾಗಿದೆ. ಹಬ್ಬಗಳು ಸಂಭ್ರಮವಿಲ್ಲದೆ ನಡೆಯುತ್ತಿವೆ.

ಕೇರಳ ರಾಜ್ಯಕ್ಕೆ ಹೊಂದಿ ಕೊಂಡAತೆ ಇರುವುದು ಮೂರು ಜಿಲ್ಲೆಗಳು ಚಾಮರಾಜನಗರ, ಕೊಡಗು, ದಕ್ಷಿಣಕನ್ನಡ. ದಕ್ಷಿಣ ಕನ್ನಡ ಹಾಗೂ ಚಾಮರಾಜನಗರಕ್ಕೆ ಯಾವುದೇ ಆರ್.ಟಿ.ಪಿ.ಸಿ.ಆರ್ ತಪಾಸಣೆ ಇಲ್ಲದೇ ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಅಲ್ಲದೇ ಬಸ್ ಸಂಚಾರ ಕೂಡ ಮೊದಲಿನಂತಾಗಿದೆ. ಅಂತಾರಾಜ್ಯ ಬಸ್‌ಗಳು ಕೂಡ ಮೈಸೂರು-ಬೆಂಗಳೂರು, ವೀರಾಜಪೇಟೆ, ಮಾಕುಟ್ಟ ಮಾರ್ಗಕ್ಕಾಗಿ ಕೇರಳಕ್ಕೆ ಸಂಚಾರವಾಗುತ್ತಿದೆ. ಅದೇ ರೀತಿ ಕೇರಳ ರಾಜ್ಯದಿಂದಲೂ ಮಾಕುಟ್ಟ ಮಾರ್ಗಕ್ಕಾಗಿ ಮೈಸೂರು-ಬೆಂಗಳೂರಿಗೆ ಬಸ್ ಸಂಚಾರ ಆರಂಭವಾಗಿದೆ. ಆದರೆ ಕೊಡಗಿಗೆ ಮಾತ್ರ ಬಸ್ ಸಂಚಾರ ಆರಂಭ ಮಾಡದೇ ಸಂಚಾರ ವ್ಯವಸ್ಥೆಯನ್ನೆ ನಿಲ್ಲಿಸಿರುವುದು ಈಗ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ದ್ವಂದ್ವ ನೀತಿಯಿಂದ ಹಲವರು ಪ್ರತಿನಿತ್ಯ ಸಂಕಷ್ಟ ಅನುಭವಿಸು ವಂತಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಬರಿಮಲೆ ಯಾತ್ರೆಯೂ ಆರಂಭವಾಗಲಿದ್ದು, ಸಾವಿರಾರು ಭಕ್ತರು ಇದೇ ಮಾರ್ಗವಾಗಿ ಚಲಿಸ ಬೇಕಾಗುತ್ತದೆ. ಆದರೆ ವೀರಾಜಪೇಟೆ-ಮಾಕುಟ್ಟ ಮಾರ್ಗವಾಗಿ ಬಸ್, ಟಿಟಿ ವಾಹನಗಳಲ್ಲಿ ಸಂಚಾರ ಮಾಡಲು ನೆಗೆಟಿವ್ ವರದಿ ನೀಡಬೇಕಾದ ಕಾರಣ ಶಬರಿಮಲೆಗೆ ಹೋಗುವ ಯಾತ್ರಾರ್ಥಿಗಳು ತೀವ್ರತರವಾದ ಕಷ್ಟವನ್ನು ಎದುರಿಸಬೇಕಾಗುತ್ತದೆ. ಇಲ್ಲವೇ ಸುತ್ತುಬಳಸಿ ಹೋಗ ಬೇಕಾಗುತ್ತದೆ. ದೇಶದಲ್ಲೇ ಈಗ ಅನ್‌ಲಾಕ್ ನಿಯಮಗಳು ಶೇ. ೯೦ಕ್ಕಿಂತ ಅಧಿಕವಾಗಿ ಚಾಲ್ತಿಯಲ್ಲಿರುವಾಗ ಇದೊಂದು ಗಡಿಯಲ್ಲಿ ಈ ರೀತಿ ನಿರ್ಬಂಧ ಮುಂದುವರಿಯುತ್ತಿರುವುದು, ಸರ್ಕಾರ ಅದನ್ನು ಗಮನಿಸದ ಹಾಗೇ ವರ್ತಿಸುತ್ತಿದೆ. ಇತ್ತ ಹಲವಾರು ಮಂದಿ ಮನವಿಗಳ ಮೇಲೆ ಮನವಿ ಸಲ್ಲಿಸುತ್ತಲೇ ಹೋಗುತ್ತಿರುವುದು ಎಲ್ಲವೂ ದಿನದಿಂದ ದಿನಕ್ಕೆ ಕಗ್ಗಂಟಾ ಗುತ್ತಿದೆಯೇ ವಿನಃ ಸಮಸ್ಯೆ ಪರಿಹಾರವಾಗುತ್ತಿಲ್ಲ. ಒಂದು ಕಡೆ ಮಳೆಗಾಲದಲ್ಲಿ ಈ ರಸ್ತೆಗೆ ಮಳೆಯೇ ಶಾಪವಾಗಿ ಪರಿಣಮಿಸಿದರೆ ಕೊರೊನಾ ಸೋಂಕಿನ ಬಳಿಕ ಆ ಶಾಪ ಮತ್ತಷ್ಟು ಕಠಿಣವಾಗಿ ಸಾಮಾನ್ಯ ಜನರನ್ನು, ಕೂಲಿ ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು, ರೋಗಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇನ್ನಾದರೂ ಸಂಬAಧ ಪಟ್ಟವರು ಈ ಗೊಂದಲವನ್ನು ಬಗೆಹರಿಸಲು ಯತ್ನಿಸಿದರೆ ಎರಡು ರಾಜ್ಯಗಳ ನಡುವೆ ಜನರು ನಿಶ್ಚಿಂತ ರಾಗಿ ಸಂಚರಿಸಬಹುದು. ರೋಗದ ಹೆಸರಿನಲ್ಲಿ ಗಡಿಯಲ್ಲಿ ನಡೆಯುತ್ತಿದೆ ಎನ್ನುವ ಹಣದ ದಂಧೆಗೂ ಬ್ರೇಕ್ ಬೀಳಬಹುದು.

- ಉಷಾ ಪ್ರೀತಮ್