ಅಧಿಕಾರಿಯಿಂದ ಬದಲಿ ವ್ಯವಸ್ಥೆ

ಸುಂಟಿಕೊಪ್ಪ, ನ. ೨೬: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ತಾ.೨೫ ರಂದು ಫಲಾನುಭವಿಗಳಿಗೆ ವಿತರಿಸಲಾದ ಪಡಿತರ ಅಕ್ಕಿ ಹಾಗೂ ಗೋಧಿಯಲ್ಲಿ ಹುಳು ಉಪ್ಪಟೆಗಳು ಕಂಡು ಬಂದಿದ್ದರಿAದ ಫಲಾನುಭವಿಗಳು ತಾಲೂಕು ಆಹಾರ ನಿರ್ದೇಶಕರ ಗಮನಕ್ಕೆ ತಂದ ಮೇರೆಗೆ ಶುಕ್ರವಾರ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಕ್ಕಿ ಹಾಗೂ ಗೋಧಿಯನ್ನು ಪರಿಶೀಲಿಸಿ ಬದಲಿ ವ್ಯವಸ್ಥೆ ಕಲ್ಪಿಸಿದರು.

ಕುಶಾಲನಗರ ತಾಲೂಕು ಆಹಾರ ಇಲಾಖೆಯ ನಿರ್ದೇಶಕಿ ಸ್ವಾತಿ ಅವರು ಭೇಟಿ ನೀಡಿ ಅಕ್ಕಿ ಹಾಗೂ ಗೋಧಿಯನ್ನು ಪರಿಶೀಲಿಸಿ ಕಳಪೆ ಪಡಿತರ ವಿತರಿಸದಂತೆ ನ್ಯಾಯಬೆಲೆ ಅಂಗಡಿಯ ವಿತರಕರಿಗೆ ಸೂಚಿಸಿದರು. ನಂತರ ಬದಲಿ ಗೋಧಿಯನ್ನು ತರಿಸಿ ವಿತರಿಸಲು ವ್ಯವಸ್ಥೆ ಕಲ್ಪಿಸಿದರು.