ಕೂಡಿಗೆ, ನ. ೨೬: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ರಾಷ್ಟಿçÃಯ ಹಸಿರು ಪಡೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸಹಭಾಗಿತ್ವದಲ್ಲಿ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ ಎಸ್.ಡಿ.ಎಂ.ಸಿ., ಇಕೋ ಕ್ಲಬ್ ಹಾಗೂ ಎನ್.ಎಸ್. ಎಸ್. ಘಟಕದ ವತಿಯಿಂದ ವಿಶ್ವ ಶೌಚಾಲಯ ದಿನದ ಅಂಗವಾಗಿ ಶೌಚಾಲಯದ ಮಹತ್ವ ಕುರಿತು ಜನಜಾಗೃತಿ ಮೂಡಿಸಲಾಯಿತು.
ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ ಶ್ರಮದಾನ ದಿಂದ ಶಾಲಾ ಶೌಚಗೃಹ ಸ್ವಚ್ಛ ಗೊಳಿಸುವ ಮೂಲಕ ಜಾಗೃತಿ ಮೂಡಿಸಿದರು
ವಿಶ್ವ ಶೌಚಾಲಯ ದಿನ ಮತ್ತು ನೈರ್ಮಲ್ಯೀಕರಣದ ಮಹತ್ವ ಕುರಿತು ಮಾತನಾಡಿದ ರಾಷ್ಟಿçÃಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಯೂ ಆದ ಶಾಲಾ ಮುಖ್ಯೋಪಾ ಧ್ಯಾಯ ಟಿ.ಜಿ. ಪ್ರೇಮಕುಮಾರ್, ಹಳ್ಳಿಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ದಿಸೆಯಲ್ಲಿ ಬಯಲು ಶೌಚಾಲಯ ಬಳಕೆಯನ್ನು ಮುಕ್ತ ಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಣ ತೊಡಬೇಕು ಎಂದರು.
ಜನ ಸಮುದಾಯಕ್ಕೆ ಶೌಚಾಲಯ ಬಳಕೆ, ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವ ಹಾಗೂ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಯಡಿ ಪ್ರತಿವರ್ಷ ನವೆಂಬರ್ ೧೯ ರಂದು ವಿಶ್ವ ಶೌಚಾಲಯ ದಿನ ಎಂದು ಆಚರಿಸಲಾಗುತ್ತಿದೆ. ಸ್ವಚ್ಛ ಭಾರತ ನಿರ್ಮಾಣ ಹಾಗೂ ಸ್ವಸ್ಥ ಆರೋಗ್ಯ ರಕ್ಷಣೆಗಾಗಿ ಬಯಲು ಶೌಚ ಮುಕ್ತ ಗೊಳಿಸಲು ಎಲ್ಲರೂ ಪಣತೊಡಬೇಕು. ವಿಶ್ವ ಸಂಸ್ಥೆ ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯಿಂದ ೨೦೧೩ರ ನವೆಂಬರ್ ೧೯ ರಂದು ‘ವಿಶ್ವ ಶೌಚಾಲಯ ದಿನ’ ಎಂದು ಘೋಷಿಸಿತು ಎಂದರು.
ಶಾಲೆಗಳಲ್ಲಿ ಬಳಸಿದ ಶೌಚಾಲ ಯವನ್ನು ಸ್ವತಃ ವಿದ್ಯಾರ್ಥಿಗಳು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆ ಕಾಪಾಡಬೇಕು. ಶೌಚಾಲಯವನ್ನು ನಿತ್ಯ ಹೀಗೆ ಸ್ವಚ್ಛಗೊಳಿಸುವ ಮೂಲಕ ಶುಚಿತ್ವ ಕಾಪಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ಸ್ವಚ್ಛತಾ ಘೋಷಣೆಗಳ ಕುರಿತು ಕರಪತ್ರ ಬಿಡುಗಡೆ ಮಾಡಿದ ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂ.ಟಿ. ದಯಾನಂದ ಪ್ರಕಾಶ್ ಮಾತನಾಡಿ, ಶೌಚಗೃಹ ರಹಿತ ಕುಟುಂಬಗಳನ್ನು ಗುರುತಿಸಿ ಅಂತಹ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲು ನೆರವಾಗಬೇಕು ಎಂದರು.
ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯ ಮಾತನಾಡಿ, ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ
ನೀಡಬೇಕು ಎಂದರು.
ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಿ. ರಮೇಶ್ ಆರೋಗ್ಯ ರಕ್ಷಣೆ ಕುರಿತು ಮಾತನಾಡಿದರು ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಪಿ.ಅನಿತಾಕುಮಾರಿ, ಅನ್ಸಿಲಾ ರೇಖಾ, ಎಸ್.ಎಂ. ಗೀತಾ, ಬಿ.ಎಡ್., ಪ್ರಶಿಕ್ಷಣಾರ್ಥಿಗಳಾದ ಎಂ. ಮೋಕ್ಷಿತ್, ಟಿ.ಯು. ಅಜಿತ, ಬಿ.ಆರ್. ಸೌಮ್ಯ ಇದ್ದರು. ನಂತರ ವಿದ್ಯಾರ್ಥಿಗಳು ಶೌಚಾಲಯದ ಸ್ವಚ್ಛತೆ, ನೈರ್ಮಲ್ಯೀಕರಣ ಹಾಗೂ ಆರೋಗ್ಯ ರಕ್ಷಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಬಯಲು ಬಹಿರ್ದೆಸೆ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿ, ಸ್ವಚ್ಛ ಗ್ರಾಮ ಸ್ವಸ್ಥ ಶೌಚಾಲಯ, ಸ್ವಚ್ಛ ಗ್ರಾಮ ಸ್ವಚ್ಛ ಭಾರತ, ಸ್ವಚ್ಛತೆಯಿದ್ದಲ್ಲಿ ಆರೋಗ್ಯ ಮುಂತಾದ ಸ್ವಚ್ಛತೆ ಕುರಿತ ಘೋಷಣೆಗಳನ್ನು ಪ್ರಚುರಪಡಿಸಿದರು.