ಮಡಿಕೇರಿ, ನ. ೨೬: ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ೪೪ನೇ ವಾರ್ಷಿಕ ಮಹಾಸಭೆ ತಾ. ೨೯ ರಂದು ಪೂರ್ವಾಹ್ನ ೧೦.೩೦ಕ್ಕೆ ಸಂಘದ ಸಭಾಂಗಣದಲ್ಲಿ, ಸಂಘದ ಅಧ್ಯಕ್ಷ ಚೆಪ್ಪುಡಿರ ಎಂ. ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಭೆಗೆ ಹಾಜರಾಗುವ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸತಕ್ಕದ್ದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ಕೋವಿಡ್-೧೯ ನಿಯಮವನ್ನು ಪಾಲಿಸಬೇಕಾಗಿ ಸಂಘದ ಪ್ರಕಟಣೆ ತಿಳಿಸಿದೆ.