ಸೋಮವಾರಪೇಟೆ,ನ.೨೫: ನಿರ್ಗತಿಕರ ಸೇವಾ ಸಂಸ್ಥೆಯಾಗಿರುವ ಇಲ್ಲಿನ ಮಲಂಗ್ ಷಾ ವಲಿ ಯೂತ್ ಕಮಿಟಿ ವತಿಯಿಂದ ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಕ್ಯಾನ್ಸರ್ ಪೀಡಿತ ರೋಗಿಯೋರ್ವರ ಚಿಕಿತ್ಸೆಗೆ ರೂ. ೫ ಸಾವಿರ ಧನ ಸಹಾಯ ವಿತರಿಸಲಾಯಿತು.

ಎಂ.ಜಿ ರಸ್ತೆ ನಿವಾಸಿ ಫಾತಿಮಾ ಅವರು ಕಳೆದ ಕೆಲ ವರ್ಷದಿಂದ ಅನಾರೋಗ್ಯಕ್ಕೀಡಾಗಿದ್ದು, ಇವರ ಪತಿ ಶಂಷುದ್ದೀನ್ ಸಹ ಮೊಣಕಾಲು ತೊಂದರೆಯಿAದ ಬಳಲುತ್ತಿದ್ದಾರೆ. ಈ ಕುಟುಂಬಕ್ಕೆ ಯೂತ್ ಕಮಿಟಿಯಿಂದ ನೆರವು ಒದಗಿಸಲಾಯಿತು. ಈ ಸಂದರ್ಭ ಸಮಿತಿಯ ಅಧ್ಯಕ್ಷ ಅಬ್ದುಲ್ ಅಜೀಜ್, ಉಪಾಧ್ಯಕ್ಷ ಮಹಮ್ಮದ್, ಕಾರ್ಯದರ್ಶಿ ಯೂಸುಫ್ ಅವರುಗಳು ಉಪಸ್ಥಿತರಿದ್ದರು.