ಮಡಿಕೇರಿ, ನ. ೨೬: ಡಿಸೆಂಬರ್ ೧ ರಂದು ವಿಶ್ವದಾದ್ಯಂತ ಏಡ್ಸ್ ನಿಯಂತ್ರಣ ಸಂಬAಧ ಜಾಗೃತಿ ಮೂಡಿಸಲು ಏಡ್ಸ್ ದಿನ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ಸಂಬAಧ ಜಾಗೃತಿ ಜಾಥಾ ಏರ್ಪಡಿಸಲಾಗಿದೆ. ಡಿ.೧ ರಂದು ಬೆಳಿಗ್ಗೆ ೯:೩೦ ಕ್ಕೆ ಜಾಥಾ ಪ್ರಾರಂಭವಾಗಲಿದೆ. ಇದರಲ್ಲಿ ಜಾನಪದ ಕಲೆಯ ಮೂಲಕ ಜನರಲ್ಲಿ ಈ ರೋಗದ ಅರಿವು ಮೂಡಿಸುವ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಹಾಗೂ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರು ಇಂದು ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜಾಥಾ ಬಳಿಕ ೧೧ ಗಂಟೆಗೆ ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ. ಜಾಥಾಗೆ ಪ್ರದಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿನರಾಳಕರ್ ಭೀಮ್‌ರಾವ್ ಲಗಮಪ್ಪ ಅವರು ಚಾಲನೆ ನೀಡಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ಏಡ್ಸ್ ಸಂಬAಧ ಜಾಗೃತಿ ಮೂಡಿಸಿರುವ ಆಯ್ದ ೩ ರೆಡ್ ರಿಬ್ಬನ್ ಕ್ಲಬ್‌ಗಳಿಗೆ ಸನ್ಮಾನ ಮಾಡಲಾಗುತ್ತದೆ. ಏಡ್ಸ್ಗೆ ಕಾರಣವಾಗಿರುವ ಹೆಚ್.ಐ.ವಿ ಪತ್ತೆ ಮಾಡಲು ರಕ್ತ ಪರೀಕ್ಷೆ ನಡೆಸುವ ಜಿಲ್ಲೆಯ ಐ.ಸಿ.ಟಿ.ಸಿ ಕೇಂದ್ರಗಳ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಗುವುದು ಹಾಗೂ ಸೋಂಕಿನ ಬಗ್ಗೆ ಏರ್ಪಡಿಸಲಾಗಿದ್ದ ಶಾಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಉಚಿತ ಚಿಕಿತ್ಸೆ

ಏಡ್ಸ್ನಿಂದ ಬಳಲುತ್ತಿರುವವರಿಗೆ ಸರಕಾರದ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಇದುವರೆಗೆ ೧,೯೦೦ ಮಂದಿ ಚಿಕಿತ್ಸೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಹೆಚ್.ಐ.ವಿ ಪಾಸಿಟಿವ್ ತಾಯಿಯಿಂದ, ಮಗುವಿಗೆ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿದ್ದು, ಗರ್ಭಿಣಿಯರಿಗೆ ಕಡ್ಡಾಯವಾಗಿ ಹೆಚ್.ಐ.ವಿ ಪರೀಕ್ಷೆ ನಡೆಸಲಾಗುತ್ತದೆ. ಪಾಸಿಟಿವ್ ಇದ್ದಲ್ಲಿ, ಹೆರಿಗೆ ಸಂದರ್ಭ ಇದಕ್ಕೆ ವಿಶೇಷ ಗಮನ ನೀಡಿ ಮಗುವಿಗೆ ಸೋಂಕು ತಗುಲದ ಹಾಗೆ ಜಿಲ್ಲೆಯ ವೈದ್ಯರು ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೪೪ ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಹೆಚ್.ಐ.ವಿ ಸಂಬAಧ ರಕ್ತ ಪರೀಕ್ಷೆ ಉಚಿತವಾಗಿ ನಡೆಸಲಾಗುತ್ತದೆ. ಮಡಿಕೇರಿ ಜಿಲ್ಲಾಸ್ಪತ್ರೆ, ವೀರಾಜಪೇಟೆ, ಸೋಮವಾರಪೇಟೆ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಕುಶಾಲನಗರ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸಾ ಕೇಂದ್ರಗಳು ಇದ್ದು, ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಏಡ್ಸ್ ಸಂಬAಧ ಯಾವುದೇ ಸಹಾಯಕ್ಕಾಗಿ ೧೦೯೭ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಡಿ.ಹೆಚ್.ಒ ಮಾಹಿತಿ ನೀಡಿದರು.

ಲೈಂಗಿಕ ಸಂಪರ್ಕ, ರಕ್ತದಿಂದ ಹರಡುತ್ತದೆ

ಏಡ್ಸ್ ರೋಗಕ್ಕೆ ಕಾರಣವಾಗಿರುವ ಹೆಚ್.ಐ.ವಿ ಲೈಂಗಿಕ ಸಂಪರ್ಕ ಹಾಗೂ ಸೋಂಕಿತರ ರಕ್ತ ಮತ್ತೊಬ್ಬರ ರಕ್ತಕ್ಕೆ ಸೇರಿಕೊಂಡರೆ ಮಾತ್ರ ಹರಡಲು ಸಾಧ್ಯ. ಆದ್ದರಿಂದ ಲೈಂಗಿಕ ಸಂಪರ್ಕ ಸಂದರ್ಭ ಕಾಂಡಮ್ ಉಪಯೋಗಿಸಬೇಕು. ರೋಗಿಗಳಿಗೆ ಬ್ಲಡ್ ಟ್ರಾನ್ಸ್ಫ್ಯೂಷನ್ ಮಾಡುವಾಗ, ದಾನಿಗಳ ರಕ್ತವನ್ನು ಪರೀಕ್ಷಿಸುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ಸೋಂಕು ಹರಡುತ್ತದೆ. ಡ್ರಗ್ ವ್ಯಸನಿಗಳು ಸಿರೀಂಜ್ ಬಳಸುವಾಗ ಒಂದೇ ಸಿರಿಂಜ್‌ನಿAದ ಹಲವಾರು ಮಂದಿ ಚುಚ್ಚಿಕೊಳ್ಳುತ್ತಾರೆ. ಇದರಲ್ಲಿ ಒಬ್ಬರಿಗೆ ಸೋಂಕಿದ್ದರೆ, ಎಲ್ಲರಿಗೂ ಹರಡುತ್ತದೆ ಎಂದರು.

ಸೋಂಕು ಇರುವವರ ಮಾಹಿತಿಯನ್ನು ಗೌಪ್ಯವಾಗಿಡುತ್ತೇವೆ. ಕೇವಲ ಕೆಲವೇ ಕೆಲವು ನಿಗದಿತ ಸಂಬAಧಿಕರಿಗೆ ಮಾತ್ರ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಸೋಂಕು ಇರುವವರ ಮಾಹಿತಿ ಬಹಿರಂಗ ಪಡಿಸಿದ್ದಲ್ಲಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ ಎಂದು ಅವರು ತಿಳಿಸಿದರು.