ವೀರಾಜಪೇಟೆ, ನ. ೨೫: ದೇಶದ ಯಾವುದೇ ಭಾಗದಲ್ಲಿ ಇಲ್ಲದ ಕಾನೂನು ನಮ್ಮ ಜಿಲ್ಲೆಯಲ್ಲಿದೆ. ಜಿಲ್ಲಾ ಗಡಿ ಭಾಗವಾದ ಮಾಕುಟ್ಟ ಹಾಗೂ ಕುಟ್ಟ ಚೆಕ್‌ಪೋಸ್ಟ್ನಲ್ಲಿ ಆರ್‌ಟಿಪಿಸಿಆರ್ ವರದಿಯನ್ನು ರದ್ದುಗೊಳಿಸಿ ೨ ಲಸಿಕೆ ಪಡೆದವರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ತಾ. ೨೭ ರಂದು ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಪೂರ್ವಹ್ನ ೧೧ ಗಂಟೆಗೆ ಪ್ರತಿಭಟನೆ ನಡೆಸಲಾಗುವದೆಂದು ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಲಚೇರಿಯಿಂದ ಮೈಸೂರು, ಮಂಗಳೂರು ಭಾಗಗಳಿಗೆ ಬಸ್‌ನ ಮುಲಕ ತೆರಳಿ ಜಿಲ್ಲೆಗೆ ಬರುತ್ತಿದ್ದಾರೆ. ಅವರಿಗೆ ಯಾವುದೇ ಆರ್‌ಟಿಪಿಸಿಆರ್ ವರದಿ ಬೇಕಾಗಿಲ್ಲ. ಮಾಕುಟ್ಟ ಚೆಕ್‌ಪೋಸ್ಟ್ ಮೂಲಕ ಬರುವ ಪ್ರಯಾಣಿಕರಿಗೆ ೭೨ ಗಂಟೆಯ ಒಳಗಿನ ಆರ್‌ಟಿಪಿಸಿಆರ್ ವರದಿಬೇಕು ಎಂಬ ನಿಯಮವಿದೆ. ಇದೀಗ ಶಬರಿಮಲೆ ಯಾತ್ರಾ ಸಮಯ ಪ್ರಾರಂಭವಾಗಿದೆ. ಎಲ್ಲಾ ಮಾಲಾಧಾರಿಗಳು, ರೋಗಿಗಳು, ರೈತರು ಪ್ರತಿನಿತ್ಯ ಕೇರಳ ಕಡೆಗೆ ತೆರಳುತ್ತಿದ್ದಾರೆ. ಚೆಕ್‌ಪೋಸ್ಟ್ನಲ್ಲಿರುವ ಕೆಲವು ಅಧಿಕಾರಿಗಳು ಕೇರಳದ ಇಂತದೆ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡು ಬರಬೇಕು ಎಂದು ತಾಕಿತು ಮಾಡುತ್ತಿದ್ದಾರೆ. ಇದರಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ. ಪ್ರಥ್ವಿನಾತ್ ಮಾತನಾಡಿ, ಸರ್ಕಾರ ಕೋವಿಡ್ ೧೯ ಕಣ್ಗಾವಲು ಜಾಗೃತ ಮಾರ್ಗಸೂಚಿಗಳ ವಿಸ್ತರಣೆ ಅದಿನಿಮಯಗಳ ಪ್ರಕಾರ ಪ್ರತಿ ೧೫ ದಿನಗಳಿಗೊಮ್ಮೆ ವಿಸ್ತರಣೆ ಮಾಡಲಾಗುತ್ತಿದೆ. ೨೪.೧೧.೨೧ ರಂದು ಸರ್ಕಾರದ ವಿಸ್ತರಣೆ ಕೊನೆಗೊಂಡಿದೆ. ಚೆಕ್‌ಪೋಸ್ಟ್ನಲ್ಲಿ ವಿಚಾರಣೆ ಮಾಡಿದರೆ ಯಾವುದೇ ಆದೇಶ ಬರಲಿಲ್ಲ. ಸರ್ಕಾರದ ಮಾರ್ಗಸೂಚಿ ಯಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂಬ ಉತ್ತರ ನೀಡುತ್ತಿದ್ದಾರೆ. ನಮ್ಮ ರಾಜ್ಯದ ಗಡಿ ಭಾಗವನ್ನು ಹೊಂದಿಕೊAಡಿರುವ ಮೈಸೂರು, ಮಂಗಳೂರು, ಚಾಮರಾಜನಗರಕ್ಕೆ ಕೇರಳಿಗರು ತೆರಳಿ ಅಲ್ಲಿಂದ ನಮ್ಮ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅವರಿಗೆ ಯಾವುದೇ ಟೆಸ್ಟ್ಗಳ ಅವಶ್ಯಕತೆ ಇರುವುದಿಲ್ಲ. ಮಾಕುಟ್ಟ, ಕುಟ್ಟ ಚೆಕ್‌ಪೋಸ್ಟ್ಗಳಲ್ಲಿ ಮಾತ್ರ ಜನರಿಗೆ ತೊಂದರೆ ನೀಡುತ್ತಿದ್ದಾರೆ. ೨ ಲಸಿಕೆ ಪಡೆದವರಿಗೆ ಅಂರ‍್ರಾಷ್ಟಿçÃಯ ಮಟ್ಟದಲ್ಲಿಯೆ ಸಂಚರಿಸಬಹುದು ಎಂದು ಕೇಂದ್ರ ಸರ್ಕಾರವೆ ಘೋಷಿಸಿದ ಮೇಲೆ ನಮ್ಮ ಜಿಲ್ಲಾಡಳಿತ ಮಾತ್ರ ಕೇಂದ್ರದ ಆದೇಶಕ್ಕೆ ಕಿಂಚಿತ್ತು ಮನ್ನಣೆ ನೀಡುತ್ತಿಲ್ಲ. ಅದ್ದರಿಂದ ಜಿಲ್ಲಾಡಳಿತ ೨ ಡೋಸ್ ಲಸಿಕೆ ಪಡೆದವರಿಗೆ ಕೇರಳದಿಂದ ಜಿಲ್ಲೆಗೆ ಬರಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯ ಮಹಮದ್ ರಾಫಿ ಮಾತನಾಡಿ, ಮಾಕುಟ್ಟ ಮೂಲಕ ಜಿಲ್ಲೆಗೆ ಬಂದರೆ ಕೋವಿಡ್ ಹರಡುತ್ತದೆ ಎಂದಾದರೆ ಬೇರೆಡೆಯಿಂದ ಬರುವ ಜನರಿಂದ ಕೋವಿಡ್ ಹರಡುವುದಿಲ್ಲವೇ. ಜನರಿಗೆ ತೊಂದರೆ ಉಂಟಾಗುತ್ತಿರುವಾಗ ಜನಪ್ರತಿನಿಧಿಗಳು ಜಾಣ ಕಿವುಡುತನ ಪ್ರದರ್ಶಿಸುವುದು ಸರಿಯಲ್ಲ. ಈ ಬಗ್ಗೆ ಗಮನಹರಿಸಬೇಕು. ಕೂಡಲೇ ಸಂಚಾರ ಮುಕ್ತಗೊಳಿಸಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಡಿ.ಸಿ. ಧ್ರುವ, ಪಟ್ಟಣ ಪಂಚಾಯಿತಿ ಸದಸ್ಯ ಅಗಸ್ಟಿನ್ ಬೆನ್ನಿ, ನಗರ ಪ್ರಧಾನ ಕಾರ್ಯದರ್ಶಿ ಶಶಿಧರನ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಶರತ್‌ಕಾಂತ್, ಕಾಂಗ್ರೆಸ್ ಮಲೆಯಾಳಿ ವಿಂಗ್ ಜಿಲ್ಲಾಧ್ಯಕ್ಷ ಗಫೂರ್ ಉಪಸ್ಥಿತರಿದ್ದರು.