ಸೋಮವಾರಪೇಟೆ,ನ.೨೫: ಅಸ್ಸಾಂ ಕಾರ್ಮಿಕನೋರ್ವ ತೋಟದ ರೈಟರ್ ಮೇಲೆ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಈರ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ತಾಲೂಕಿನ ಎ.ಜೆ. ಎಸ್ಟೇಟ್‌ನಲ್ಲಿ ರೈಟರ್ ಆಗಿರುವ ಮಾಜೀ ಸೈನಿಕ ವಸಂತ್ ಎಂಬವರ ಮೇಲೆ ಅಸ್ಸಾಂ ಮೂಲದ ಕಾರ್ಮಿಕ ಫೈಜುದ್ದೀನ್ ಎಂಬಾತ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಘಟನೆಯಿಂದ ವಸಂತ್ ಅವರ ತಲೆಗೆ ಗಾಯವಾಗಿದೆ.

ಇದೇ ಪ್ರಕರಣಕ್ಕೆ ಸಂಬAಧಿಸಿದAತೆ ಫೈಜುದ್ದೀನ್ ಸಹ ಪೊಲೀಸರಿಗೆ ದೂರು ನೀಡಿದ್ದು, ತೋಟದ ರೈಟರ್ ತನ್ನ ಸಹೋದರಿಯ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪಿಸಿದ್ದಾನೆ.

ಅಸ್ಸಾಮಿನಿಂದ ಕರೆತಂದಿರುವ ಸುಮಾರು ೨೫ ಮಂದಿ ಕಾರ್ಮಿಕರನ್ನು ಫೈಜುದ್ದೀನ್, ಎ.ಜೆ. ಎಸ್ಟೇಟ್‌ಗೆ ಕೆಲಸಕ್ಕೆ ಬಿಟ್ಟಿದ್ದು, ನಿನ್ನೆ ದಿನ ಲೈನ್‌ಮನೆಯತ್ತ ರೈಟರ್ ವಸಂತ್ ತೆರಳಿದ ಸಂದರ್ಭ ಗಲಾಟೆ ಸಂಭವಿಸಿದೆ. ಮಹಿಳಾ ಕಾರ್ಮಿಕರಿಗೆ ವೇತನ ಕಡಿಮೆ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಫೈಜುದ್ದೀನ್, ವಸಂತ್ ಅವರೊಂದಿಗೆ ಜಗಳ ತೆಗೆದಿದ್ದಾನೆ.

ಎಲ್ಲಾ ಕಡೆಯಲ್ಲೂ ನೀಡುತ್ತಿರುವಷ್ಟೇ ಸಂಬಳವನ್ನು ಇಲ್ಲೂ ನೀಡಲಾಗುತ್ತಿದೆ. ಹೆಚ್ಚು ನೀಡಲು ಸಾಧ್ಯವಿಲ್ಲ ಎಂದು ತೋಟದ ರೈಟರ್ ತಿಳಿಸಿದ ಸಂದರ್ಭ ಈರ್ವರ ನಡುವೆ ಜಗಳ ಏರ್ಪಟ್ಟಿದ್ದು, ಸ್ಥಳದಲ್ಲಿದ್ದ ಮರದ ದೊಣ್ಣೆಯಿಂದ ಫೈಜುದ್ದೀನ್ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ವಸಂತ್ ಅವರ ತಲೆ ಭಾಗಕ್ಕೆ ಪೆಟ್ಟಾಗಿದೆ.

ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಫೈಜುದ್ದೀನ್ ವಿರುದ್ಧ ೩೦೭ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ. ಇದೇ ಘಟನೆಗೆ ಸಂಬAಧಿಸಿದAತೆ ಫೈಜುದ್ದೀನ್ ಸಹ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ತಮ್ಮ ಸಹೋದರಿಯ ಮಗಳೊಂದಿಗೆ ತೋಟದ ರೈಟರ್ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪಿಸಿದ್ದಾನೆ. ಈ ದೂರಿನ ಮೇರೆ ವಸಂತ್ ವಿರುದ್ಧವೂ ಮೊಕದ್ದಮೆ ದಾಖಲಾಗಿದೆ. ಈರ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.