ಶನಿವಾರಸಂತೆ, ನ. ೨೪: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೨೦೨೧-೨೨ನೇ ಸಾಲಿನ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾಗಿರುವ ಬೆಳೆಗಳಿಗೆ ಪರಿಹಾರ ನೀಡಲು ತಾಲೂಕು ತಹಶೀಲ್ದಾರ್ ಕಚೇರಿ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಸಂಬAಧ ಪರಿಹಾರ ತಂತ್ರಾAಶದಲ್ಲಿ ದಾಖಲೆ ನಮೂದಿಸಬೇಕಾಗಿರುವುದರಿಂದ ಬೆಳೆ ಹಾನಿಯಾಗಿರುವ ರೈತರು ತಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಮೊಬೈಲ್ ಸಂಖ್ಯೆಯೊAದಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಕಾಫಿ ಬೆಳೆಗೆ ಸಂಬAಧಿಸಿದAತೆ ಕಾಫಿ ಬೋರ್ಡ್ ವತಿಯಿಂದ ಘೋಷಿಸಲಾದ ಶೇ. ೩೩ ಕ್ಕಿಂತ ಹೆಚ್ಚಿಗೆ ಕಾಫಿ ಬೆಳೆ ನಷ್ಟ ಉಂಟಾಗಿರುವ ಕೊಡ್ಲಿಪೇಟೆ ಹೋಬಳಿಯ ಎಲ್ಲಾ ಗ್ರಾಮಗಳ ಪರಿಹಾರ ಅರ್ಜಿಗಳನ್ನು ಕೊಡ್ಲಿಪೇಟೆ ನಾಡಕಚೇರಿಯಲ್ಲಿ ಸ್ವೀಕರಿಸಲಾಗುವುದು ಎಂದು ಉಪ ತಹಶೀಲ್ದಾರ್ ಪುರುಷೋತ್ತಮ್ ಹಾಗೂ ಕಂದಾಯ ಪರಿವೀಕ್ಷಕ ಮನುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.