ಭಾಗಮಂಡಲ, ನ. ೨೪: ಇಲ್ಲಿಗೆ ಸಮೀಪದ ಚೇರಂಗಾಲ ಗ್ರಾಮದ ಶ್ರೀ ಈಶ್ವರ ಭಗವತಿ ದೇವಾಲಯದಲ್ಲಿ ವಾರ್ಷಿಕ ಪೂಜೆ ನಡೆಯಿತು. ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರ ವತಿಯಿಂದ ಅನ್ನದಾನ ನಡೆಯಿತು. ಈ ಸಂದರ್ಭ ತಕ್ಕರಾದ ಸಿರಕಜೆ ಸುಂದರ, ಕಾರ್ಯದರ್ಶಿ ಮತ್ತಾರಿ ರಾಜ, ಅರ್ಚಕ ರವಿ ಭಟ್, ಅರುಣಾ, ಸಂಘದ ಪ್ರಮುಖರಾದ ಸಿರಕಜೆ ಟಿ. ಭವನ್ ಕುಮಾರ್, ಕುಂಬನ ರವೀಂದ್ರ, ಮೂಲೆಮಜಲು ಸುದೀಪ್ ಹಾಜರಿದ್ದರು.