ಶನಿವಾರಸಂತೆ, ನ. ೨೪: ಬೈಕ್‌ಗೆ ಕಾರೊಂದು ಡಿಕ್ಕಿಯಾಗಿ ಬೈಕ್ ಸವಾರರು ಗಾಯಗೊಂಡ ಘಟನೆ ಸಮೀಪದ ಗೌಡಳ್ಳಿ ಗ್ರಾಮದಲ್ಲಿ ನಡೆದಿದೆ.
ದೊಡ್ಡಕೊಳತ್ತೂರು ಗ್ರಾಮದ ಕೂಲಿ ಕಾರ್ಮಿಕ ಸೂರ್ಯ ಹಾಗೂ ಸಂಬAಧಿ ಚೇತನ್ ಗಾಯಗೊಂಡವರು. ಬೈಕ್‌ನಲ್ಲಿ ಸೋಮವಾರಪೇಟೆ ಕಡೆ ಹೋಗುವಾಗ ಅಪಘಾತ ನಡೆದಿದೆ. ಗಾಯಾಳುಗಳಿಬ್ಬರಿಗೆ ಸೋಮವಾರಪೇಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂರ್ಯ ಸಹೋದರ ಡಿ.ಆರ್. ಸೋಮಶೇಖರ್, ಕಾರು ಚಾಲಕ ಗಿರೀಶ್ ಮೇಲೆ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದು, ಶನಿವಾರಸಂತೆಯ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಸಿದ್ದಯ್ಯ ೨೭೯, ೩೩೭ ಐಪಿಸಿ ರೀತ್ಯ ಪ್ರಕರಣ ದಾಖಲಿಸಿದ್ದಾರೆ.