ಶನಿವಾರಸಂತೆ, ನ. ೨೪: ಸಮೀಪದ ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮದ ಪುಟ್ಟರಾಜು (೬೩) ಅವರು ಅನಾರೋಗ್ಯ ಕಾರಣ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತ ಪುಟ್ಟರಾಜು ತಮ್ಮ ಪತ್ನಿ ಭಾಗ್ಯವತಿ ಜೊತೆ ವಾಸಿಸುತ್ತಿದ್ದು, ಇಬ್ಬರು ಪುತ್ರರು ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುತ್ತಾರೆ.

ಪುಟ್ಟರಾಜು ದೀರ್ಘಕಾಲ ದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಮದ್ಯವ್ಯಸನಿಯೂ ಆಗಿದ್ದರು. ಹೊಟ್ಟೆ ನೋವು ಸಹಿಸಲಾರದೇ ಕಳೆನಾಶಕ ಸೇವಿಸಿದ್ದು, ಸಂಬAಧಿ ಸಂತೋಷ್ ಹಾಸನ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ತಿಳಿಸಿದ್ದಾರೆ.

ಪುತ್ರ ಕೆ.ಪಿ. ಮೋಹನ್ ಕುಮಾರ್ ದೂರು ನೀಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್ಟೇಬಲ್ ಸಿದ್ದಯ್ಯ ಪ್ರಕರಣ ದಾಖಲಿಸಿರುತ್ತಾರೆ.