ಮಡಿಕೇರಿ, ನ. ೨೩: ಬಲಮುರಿ ಗ್ರಾಮದ ಕೊಟ್ಟಕೇರಿಯನ ಐನ್‌ಮನೆಯಲ್ಲಿ ಹುತ್ರಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಕೊಟ್ಟಕೇರಿಯನ ಲೋಹಿತ್ ಸಾಂಪ್ರದಾಯಿಕ ಉಡುಗೆತೊಟ್ಟು, ಗದ್ದೆಯಿಂದ ಕದಿರು ತಂದು ಪೂಜೆ ಸಲ್ಲಿಸಿ ನಂತರ ಕುಟುಂಬದವರೆಲ್ಲರೂ ಸೇರಿ ಸಹಭೋಜನ ಮಾಡಿದರು. ಈ ಸಂದರ್ಭದಲ್ಲಿ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಡಿ. ದಯಾನಂದ ಅವರನ್ನು ಕುಟುಂಬದವರು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರಾದ ಕೆ.ಸಿ. ದರ್ಮೇಂದ್ರ, ವಸಂತ, ಸೋಮಣ್ಣ, ಬಾಲಕೃಷ್ಣ, ಆನಂದ, ಸೀತಾರಾಮ, ತಿಮ್ಮಯ್ಯ, ನವೀನ್, ಮೋಹನ್, ಕರುಣಾಕರ, ಶೋಭಾ, ಸಾವಿತ್ರಿ, ಶಾರದ, ಮೀನಾ, ಅಂಜಲಿ, ಸುಚಿತ್ರ, ಸುಜಿತ್, ಶ್ರೀಜಾ ಮತ್ತು ಇತರರು ಹಾಜರಿದ್ದರು.