*ಗೋಣಿಕೊಪ್ಪ, ನ. ೨೪: ಅರುವತ್ತೊಕ್ಲು ಮೈಸೂರಮ್ಮ ನಗರದ ಶ್ರೀ ಆಶೀರ್ವಾದ ಭಕ್ತ ಮಂಡಳಿ ವತಿಯಿಂದ ನಡೆಯುವ ಮುತ್ತಪ್ಪ ದೇವರ ಪುತ್ತರಿ ವೆಳ್ಳಾಟಂ ತಾ. ೨೭ರಂದು ಸಂಜೆ ನಡೆಯಲಿದೆ ಎಂದು ಮಂಡಳಿಯ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.
ಅಂದು ಸಂಜೆ ೪ ಗಂಟೆಗೆ ಮಲೆ ಇಳಿಸುವುದು, ೭ ಗಂಟೆಗೆ ಮುತ್ತಪ್ಪನ ವೆಳ್ಳಾಟಂ, ೯ ಗಂಟೆಗೆ ನೆರೆದ ಸರ್ವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.