ನಾಪೋಕ್ಲು, ನ. ೨೩: ಹುತ್ತರಿ ಹಬ್ಬದ ಪ್ರಯುಕ್ತ ಅಮ್ಮಂಗೇರಿಯ ಶ್ರೀ ಪಾಡಿ ಸುಬ್ರಮಣ್ಯ ಯುವಕ ಸಂಘದ ವತಿಯಿಂದ ಸ್ಥಳೀಯ ಮೈದಾನದಲ್ಲಿ ೩೫ನೇ ವರ್ಷದ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದ ಉದ್ಘಾಟನೆ ಯನ್ನು ಗ್ರಾಮದ ಹಿರಿಯರಾದ ಪೊಂಗೇರ ಚಂಗಪ್ಪ ನೆರವೇರಿಸಿದರು. ಥ್ರೋಬಾಲ್, ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ವಾಲಿಬಾಲ್, ಬಕೆಟ್ಗೆ ಚೆಂಡು ಹಾಕುವದು, ಹಗ್ಗಜಗ್ಗಾಟ, ಚೆಂಡು ಬದಲಾಯಿಸುವ ಸ್ಪರ್ಧೆಗಳಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಕಣಿಯಂಡ ಅಶ್ವಿನಿ ರೋಶನ್, ಕಣಿಯಂಡ ಗಣೇಶ್, ಬೊಳ್ಳನಮಂಡ ನಾಣಯ್ಯ, ಕೋಲೆಯಂಡ ಬಿಂದು ಚಂಗಪ್ಪ, ಅಳ್ಳಿಮಾಡ ಸುನಂದ, ಪೊಂಗೇರ ಉಮೇಶ್ ಪಾಲ್ಗೊಂಡಿ ದ್ದರು. ಕ್ರೀಡಾಕೂಟದಲ್ಲಿ ಪೊಂಗೇರ ಅಮ್ಮವ್ವ, ಪೊಂಗೇರ ಶಿಲ್ಪಾ ಲೋಕೇಶ್, ಕಣಿಯಂಡ ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಕೋವಿಡ್-೧೯ರ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ಗಳನ್ನು ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಶುಶ್ರೂಷಕಿಯರಾದ ಬೊಳ್ಳನಮಂಡ ಜಯಶ್ರೀ ಉತ್ತಪ್ಪ, ಪೊಂಗೇರ ಕೇಶ್ವರಿ ಬೋಪಣ್ಣ, ಪೊಂಗೇರ ಇಂಪಾ ಶರಣ್, ಅಂಗನವಾಡಿ ಕಾರ್ಯಕರ್ತೆ ಪೊಂಗೇರ ನಳಿನಿ, ಆಶಾ ಕಾರ್ಯಕರ್ತೆ ಯರಾದ ಕಣಿಯಂಡ ಅಶ್ವಿನಿ ರೋಶನ್, ಕಣಿಯಂಡ ಪಲ್ಲವಿ ತಮ್ಮಯ್ಯ ಅವರುಗಳನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ರಮಣ್ಯ ಯುವಕ ಸಂಘದ ಅಧ್ಯಕ್ಷ ಪೊಂಗೇರ ಉಲ್ಲಾಸ್ ತಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಬೊಳ್ಳನ್ನಮ್ಮಂಡ ಪೊನ್ನಪ್ಪ, ಸಹ ಕಾರ್ಯದರ್ಶಿ ಕೋಲೆಯಂಡ ಪೊನ್ನಪ್ಪ, ಉಪಾಧ್ಯಕ್ಷ ಕಣಿಯಂಡ ಹರೀಶ್, ಸದಸ್ಯರು ಮತ್ತಿತರರು ಇದ್ದರು.