ಮಡಿಕೇರಿ, ನ. ೨೪: ಗೋಣಿಕೊಪ್ಪಲು ವಿನ ಕೈಕೇರಿಯಲ್ಲಿರುವ ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ಬಾರಿತ್ತಾಯ, ಉಪಾಧ್ಯಕ್ಷರಾಗಿ ರಾಘವೇಂದ್ರ ವೈಲಾಯ ಹಾಗೂ ಮಂಜುನಾಥ್ ಎ.ವಿ., ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕೇಕುಣ್ಣಾಯ, ಖಜಾಂಚಿಯಾಗಿ ಪವನ್ ಕಂದಿಪಾಡಿತ್ತಾಯ ಹಾಗೂ ಸಹ ಕಾರ್ಯದರ್ಶಿಯಾಗಿ ಲಲಿತಾ ಹರಿನಾರಾಯಣ ಅವರುಗಳು ಆಯ್ಕೆಯಾಗಿದ್ದಾರೆ.