ಸುಂಟಿಕೊಪ್ಪ,ನ.೨೪ : ಹಾಲೇರಿ ಗ್ರಾಮದ ಭದ್ರಕಾಳಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಕಾಂಡನಕೊಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹುತ್ತರಿ ಕೋಲಾಟ ಆಯೋಜಿಸಲಾಯಿತು.

ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿ ಗ್ರಾಮಕ್ಕೆ ಒಳಗೊಂಡ ಕಾಂಡನಕೊಲ್ಲಿ, ಕಡಂದಾಳು, ಕೊಪ್ಪತ್ತೂರು, ಹೆಮ್ಮೆತಾಳು ಗ್ರಾಮದ ಸದಸ್ಯರುಗಳು ನಾಡಮಂದ್‌ನಲ್ಲಿ ಎಲ್ಲರೂ ಜೊತೆಯಾಗಿ ಹುತ್ತರಿ ಕೋಲಾಟ ನಡೆಸಿ ಸಂಭ್ರಮಿಸಿದರು. ದೇವಾಲಯದ ಸಂಪ್ರದಾಯಗಳನ್ನು ಪರಿಪಾಲನೆ ಮಾಡಿ ಎಲ್ಲಿಯೂ ವಿಘ್ನಗಳಾಗದಂತೆ ಎಚ್ಚರಿಕೆಯಿಂದ ಕೋಲಾಟವನ್ನು ಮಾಡಿ ಹುತ್ತರಿ ಕೋಲಾಟಕ್ಕೆ ತೆರೆ ಎಳೆಯಲಾಯಿತು.

ಈ ಸಂದರ್ಭ ಮೂಲವೆರ ಬಿದ್ದಪ್ಪ, ಅಯ್ಯಕುಟ್ಟೀರ ಮಾದಪ್ಪ, ಮರುವಂಡ ಸತ್ಯ ಕಾರ್ಯಪ್ಪ, ಬಿಜ್ಜಂಡ ಮೊಣ್ಣಪ್ಪ ಸುಬ್ರಮಣಿ, ಒಡ್ಡಚೇಟ್ಟಿರ ತಿಮ್ಮಯ್ಯ, ನಾಡೇನ ಮಾದಯ್ಯ, ಮನಿಯಪ್ಪನ ಹರೀಶ್, ಐಮುಡಿಯಂಡ ಹರೀಶ್ ಮತ್ತಿತರರು ಇದ್ದರು.