ಮಡಿಕೇರಿ, ನ.೨೪: ಚೆಯ್ಯಂಡಾಣೆ ಗ್ರಾಮದ ಕೋಕೇರಿಯ ಪುಲ್ಲಿಮಕ್ಕಿಯಲ್ಲಿ ಚೆರುವಾಳಂಡ ಕುಟುಂಬಸ್ಥರ ನೇತೃತ್ವದಲ್ಲಿ ಕೊಡಗಿನ ಸಾಂಪ್ರದಾಯಿಕ ಪುತ್ತರಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.

ಕುಟುಂಬದ ಪಟ್ಟೆದಾರ ಸಿ.ಎಂ.ಮುತ್ತಣ್ಣ ಅವರ ಮುಂದಾಳತ್ವದಲ್ಲಿ ಚೆರುವಾಳಂಡ ಕುಟುಂಬದ ಗದ್ದೆಗೆ ತೆರಳಿ ಧಾನ್ಯಲಕ್ಷಿö್ಮ ಕದಿರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಕದಿರು ತೆಗೆದು ದೇವರನ್ನು ಪ್ರಾರ್ಥಿಸುತ್ತಾ ಮನೆಗೆ ತರಲಾಯಿತು. ನಂತರ ಹಬ್ಬದ ವಿಶೇಷ ಖಾದ್ಯಗಳನ್ನು ಸವಿದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಚೆರುವಾಳಂಡ ಪ್ರಭು ತಿಮ್ಮಯ್ಯ, ಮುದ್ದಪ್ಪ, ಕಾವೇರಪ್ಪ, ಕುಶಾಲಪ್ಪ, ರಾಕೇಶ್, ಸುಬ್ಬಯ್ಯ, ನಾಣಯ್ಯ, ಗಣಪತಿ, ನವೀನ್, ಸುನಿಲ್ ಕುಶಾಲಪ್ಪ, ಜೀವನ್ ಬೋಪಣ್ಣ, ಅಚ್ಚಯ್ಯ, ಭೀಮಯ್ಯ, ಪವನ್ ಮಾಚಯ್ಯ, ಕಿಶನ್ ಸೋಮಯ್ಯ ಸೇರಿದಂತೆ ಕುಟುಂಬಸ್ಥರು ಪಾಲ್ಗೊಂಡಿದ್ದರು.