ಕುಶಾಲನಗರ, ನ, ೨೨: ಕೊಡಗು ಜಿಲ್ಲೆಯ ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ಪೋಲೀಸ್ ಅಧಿಕಾರಿಗಳು ವಿನಾಕಾರಣ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಬಂಧಿಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಕುಶಾಲನಗರದ ಡಿವೈಎಸ್ಪಿ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿದರು.

ಕುಶಾಲನಗರ ಮತ್ತು ಶನಿವಾರಸಂತೆ ವೃತ್ತ ನಿರೀಕ್ಷಕ ಮಹೇಶ್ ಮತ್ತು ಪರಶಿವಮೂರ್ತಿ ಅವರುಗಳು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ವಿರುದ್ಧ ಗೂಂಡಾ ವರ್ತನೆ ತೋರುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾಯಿಸಬೇಕು. ಶನಿವಾರಸಂತೆ ವೃತ್ತ ನಿರೀಕ್ಷಕರ ವಿರುದ್ಧ ಇಲಾಖಾ ತನಿಖೆಯಾಗಬೇಕು. ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಅವರನ್ನು ಕೂಡಲೇ ಜಿಲ್ಲೆಯಿಂದ ಬೇರೆಡೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ತಪ್ಪಿದಲ್ಲಿ ಸೋಮವಾರಪೇಟೆ ಶಾಸಕರ ಕಚೇರಿ ಬಳಿ ಹಿಂಜಾವೇ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂಜಾವೇ ಪ್ರಾಂತೀಯ ಕಾರ್ಯದರ್ಶಿ ಉಲ್ಲಾಸ್ ಹೇಳಿದರು.

ಪ್ರತಿಭಟನೆ ವೇಳೆ ಹಿಂಜಾವೇ ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ, ಉಪಾಧ್ಯಕ್ಷ ಸುಭಾಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಅಜಿತ್ ಕುಕ್ಕೇರ, ಪ್ರಾಂತ ಸಂಘ ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಪ್ರಚಾರಕ ಸಂದೇಶ್, ಪ್ರಮುಖರಾದ ಮಂಜು, ನಾಣಿ, ಹರೀಶ್, ಮಧು, ಉಮೇಶ್, ಅಮೃತ್ ರಾಜ್, ಎಂ.ಡಿ. ಕೃಷ್ಣಪ್ಪ, ಸುಮನ್, ಸಂಗೀತ, ಭರತ್ ಮಾಚಯ್ಯ, ಮೇಕೇರಿಕುಮಾರ್, ಮಹೇಶ್,

(ಮೊದಲ ಪುಟದಿಂದ) ರಾಜೀವ, ನವನೀತ್, ರಾಮು, ಮಣಿಕಂಠ, ಹೆರೂರು ಚಂದ್ರಶೇಖರ್, ಸಂಧ್ಯಾ ನಾಣಿ ಸೇರಿದಂತೆ ೨೦೦ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಎಸ್ಪಿ ಭೇಟಿ: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲಿಸಲಾಗಿದೆ ಎಂಬ ವಿಚಾರಕ್ಕೆ ಸಂಬAಧಿಸಿದAತೆ ಕುಶಾಲನಗರದ ಡಿವೈಎಸ್ಪಿ ಕಚೇರಿ ಎಸ್ಪಿ ಭೇಟಿ: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲಿಸಲಾಗಿದೆ ಎಂಬ ವಿಚಾರಕ್ಕೆ ಸಂಬAಧಿಸಿದAತೆ ಕುಶಾಲನಗರದ ಡಿವೈಎಸ್ಪಿ ಕಚೇರಿ ನಿರತ ಕಾರ್ಯಕರ್ತರು ಮನವಿ ಪತ್ರವನ್ನು ನೀಡಿದರು. ಬಳಿಕ ಪ್ರತಿಕ್ರಿಯಿಸಿದ ಎಸ್ಪಿ ಕ್ಷಮಾ ಮಿಶ್ರ, ವಿಹೆಚ್‌ಪಿ ಕಾರ್ಯಕರ್ತರ ಅಹವಾಲಿನ ಸಂಬAಧ ಸೂಕ್ತ ಪರಿಶೀಲನೆ ನಡೆಸಲಾಗುವುದು ಎಂದರು.

ಈ ಸಂದರ್ಭ ಡಿವೈಎಸ್ಪಿ ಶೈಲೇಂದ್ರ, ಸೋಮವಾರಪೇಟೆ ವೃತ್ತ ನಿರೀಕ್ಷಕ ಮಹೇಶ್, ಕುಶಾಲನಗರ ಗ್ರಾಮಾಂತರ ಠಾಣೆಯ ಎಸ್‌ಐ ಶಿವಶಂಕರ್, ಸಂಚಾರಿ ಠಾಣೆಯ ಎಸ್‌ಐ ಚಂದ್ರಶೇಖರ್, ಮಾದೇಶ ಮೊದಲಾದವರಿದ್ದರು.