ಮಡಿಕೇರಿ, ನ. ೨೨: ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಡಾ. ಮಂಥರ್‌ಗೌಡ ಅವರನ್ನು ಕೆಪಿಸಿಸಿ ಆಯ್ಕೆ ಮಾಡಿದೆ. ಮಂಥರ್ ಗೌಡ ಮಾಜಿ ಸಚಿವ ಎ. ಮಂಜು ಅವರ ಪುತ್ರ, ಹೊರಗಿನವರಿಗೆ ಟಿಕೆಟ್ ಕೊಡಬಾರದು, ಜಿಲ್ಲೆಯವರಿಗೆ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಪ್ರಮುಖರು ಹೈಕಮಾಂಡ್ ಅನ್ನು ಒತ್ತಾಯಿಸಿದ್ದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೂಡ ಕೇಳಿಬಂದಿತ್ತು. ಇದೀಗ ಅಂತಿಮವಾಗಿ ಹೈಕಮಾಂಡ್ ಮಂಥರ್ ಗೌಡ ಅವರ ಹೆಸರನ್ನು ಅಂತಿಮಗೊಳಿಸಿದೆ.

ಕಾAಗ್ರೆಸ್ ಮರುಸ್ಥಾಪನೆ

ಕುಶಾಲನಗರ: ಕೊಡಗಿನಲ್ಲಿ ಮತ್ತೆ ಕಾಂಗ್ರೆಸ್ ವೈಭವ ಮರುಕಳಿಸ ಬೇಕೆನ್ನುವುದು ಪ್ರತಿಯೊಬ್ಬ ಕಾಂಗ್ರೆಸಿಗರ ಆಶಯವಾಗಿದೆ ಎಂದು ಕೊಡಗು ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ತಿಳಿಸಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ

(ಮೊದಲ ಪುಟದಿಂದ) ನೀಡಿದ ಅವರು ಸ್ಥಳೀಯ ಮುಖಂಡರು, ೧೫ ವಲಯಗಳ ಅಧ್ಯಕ್ಷರುಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಸಲಹೆ, ಸೂಚನೆಗಳನ್ನು ಸ್ವೀಕರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಸೋಮವಾರಪೇಟೆ ನಗರೂರು ಮೂಲದಿಂದ ಬಂದವನು. ಕೊಡಗಿನ ಋಣ ತೀರಿಸಲು ಅವಕಾಶ ದೊರೆತಿದೆ. ಕೊಡಗಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಬಿಜೆಪಿ ಆಡಳಿತದಿಂದ ಬೇಸತ್ತಿರುವ ಜನ ಬದಲಾವಣೆ ಬಯಸಿದ್ದಾರೆ. ಕೊಡಗಿನಲ್ಲಿ ಕಾಂಗ್ರೆಸ್ ವಿಜಯ ಬಾವುಟ ಹಾರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾಂಗ್ರೆಸಿಗರು ಒಗ್ಗೂಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗಿನ ಜನತೆ ಯುವಕರಿಗೆ ಒಂದು ಅವಕಾಶ ನೀಡಿ ಕಾಂಗ್ರೆಸ್‌ಗೆ ಆಶೀರ್ವದಿಸಬೇಕು. ಹೈಕಮಾಂಡ್ ಸೂಚನೆಯಂತೆ ಸ್ಪರ್ಧಿಸಿದ್ದು ಗೆಲುವಿಗೆ ಪಕ್ಷದೊಂದಿಗೆ ಶ್ರಮಿಸಲಾಗುತ್ತಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್, ನಗರ ಘಟಕ ಅಧ್ಯಕ್ಷ ಶರೀಫ್ ಇಬ್ರಾಹಿಂ, ಅಲ್ಪಸಂಖ್ಯಾತ ಘಟಕದ ಉಸ್ಮಾನ್, ಪ್ರಮುಖರಾದ ಗೋವಿಂದರಾಜ್ ದಾಸ್, ಜನಾರ್ಧನ್, ಹೂವಯ್ಯ ಮತ್ತಿತರರು ಇದ್ದರು.