ಕಣಿವೆ, ನ. ೨೩: ಕುಶಾಲನಗರದ ಐತಿಹಾಸಿಕವಾದ ಹಿನ್ನೆಲೆಯನ್ನು ಹೊಂದಿರುವ ಶ್ರೀ ಗಣಪತಿ ದೇವರ ವಾರ್ಷಿಕ ರಥೋತ್ಸವ ಮಂಗಳವಾರ ಬೆಳಿಗ್ಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಾರ್ತಿಕಮಾಸದ ಕೃಷ್ಣಪಕ್ಷದ ಧನುರ್ ಲಗ್ನದಲ್ಲಿ ಬೆಳಿಗ್ಗೆ ೮.೪೪ ಗಂಟೆಗೆ ಸರಿಯಾಗಿ ಗಣಪತಿ ದೇವತಾ ಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿರಿಸಿದ ಬಳಿಕ ಅರ್ಚಕರ ತಂಡ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ನೆರೆದಿದ್ದ ಭಕ್ತಗಣ ಗಣಪತಿ ದೇವರ ಜಯಕಾರವನ್ನು ಝೇಂಕಾರದೊAದಿಗೆ ರಥವನ್ನು ಎಳೆದು ಪುನೀತರಾದರು.
ದೇವಾಲಯದ ಮುಂಬದಿಯಿAದ ಹೊರಟ ವಿನಾಯಕನ ರಥವನ್ನು ರಥಬೀದಿಯ ಆಂಜನೇಯ ಸ್ವಾಮಿ ದೇವಾಲಯದವರೆಗೆ ಎಳೆದು ತಂದ ಭಕ್ತರು ಬಳಿಕ ಸ್ವಸ್ಥಾನಕ್ಕೆ ಮರಳಿಸಿ ಪೂಜ್ಯತಾ ಭಾವ ಮೆರೆದರು.
ರಥೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಗಣಪತಿ ದೇವಾಲಯಕ್ಕೆ ವಿದ್ಯುತ್, ತಳಿರು - ತೋರಣ ಹಾಗೂ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು.
ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರಬಾಬು ನೇತೃತ್ವದಲ್ಲಿ ರಾಘವೇಂದ್ರ ಭಟ್, ಆದಿತ್ಯಸುಬ್ರಮಣ್ಯ ಭಟ್, (ಮೊದಲ ಪುಟದಿಂದ) ಕೃಷ್ಣಮೂರ್ತಿ ಭಟ್, ಯೋಗೇಶ ಭಟ್, ಸತ್ಯನಾರಾಯಣ ಭಟ್, ಸುಬ್ರಾಯ ಭಟ್ ಒಳಗೊಂಡAತೆ ಅರ್ಚಕರ ತಂಡದಿAದ ದೇಗುಲದ ದೇವತಾಮೂರ್ತಿಗಳ ಪೂಜೆ ಹಾಗೂ ರಥ ಬಲಿ ಮೊದಲಾದ ಸೇವೆಗಳು ಸಾಂಗವಾಗಿ ಜರುಗಿದವು.
ಈಡುಗಾಯಿ ಸಮರ್ಪಣೆ
ದೇವಾಲಯದ ಎದುರು ಅಲಂಕೃತ ರಥದೊಳಗೆ ಗಣಪತಿ ದೇವರನ್ನು ಪ್ರತಿಷ್ಠಾಪಿಸಿದೊಡನೆ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಹೊತ್ತ ಹಲವು ಭಕ್ತರು ನೂರಾರು ಸಂಖ್ಯೆಯಲ್ಲಿ ದೇವರ ಹೆಸರಿನಲ್ಲಿ ತೆಂಗಿನಕಾಯಿ ಈಡುಗಾಯಿ ಹಾಕುವುದು ರಥೋತ್ಸವದ ಪ್ರತೀ ವರ್ಷದ ಮುಖ್ಯ ಆಕರ್ಷಣೆಯಾಗಿತ್ತು.
ಹಾಗೆಯೇ ರಥೋತ್ಸವ ಸಾಗುತ್ತಿದ್ದ ರಥಬೀದಿಯ ಮಾರ್ಗದಲ್ಲಿದ್ದ ವಿದ್ಯುತ್ ತಂತಿಗಳನ್ನು ಸರಿಸುವ ಕಾಯಕದಲ್ಲಿ ಸ್ಥಳೀಯ ಚೆಸ್ಕಾಂ ಸಿಬ್ಬಂದಿಗಳು ತೊಡಗಿದರೆ, ತೆಂಗಿನ ಕಾಯಿ ಈಡುಗಾಯಿಯ ತೆಂಗಿನ ಕಂಠದ ಚೂರುಗಳು ಭಕ್ತರ ಬರಿಗಾಲಿಗೆ ತಾಗದಂತೆ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಪಂಚಾಯಿತಿ ಪೌರಕಾರ್ಮಿಕರು ತಮ್ಮ ಕಾಯಕ ಮೆರೆದರು.
ರಥೋತ್ಸವದ ಚಾಲನೆಗೆ ಮೊದಲು ದೇವಾಲಯದ ಮುಂದೆ ಸಂಪ್ರದಾಯದAತೆ ಗೋಪೂಜೆ ನೆರವೇರಿಸಲಾಯಿತು.
ಪ್ರತೀ ವರ್ಷ ರಥೋತ್ಸವದ ಕೆಲ ನಿಮಿಷಗಳ ಮುನ್ನಾ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರಥದ ಮುಂದೆ ಹಚ್ವುತ್ತಿದ್ದ ಸಾಮೂಹಿಕ ಕರ್ಪೂರದಾರತಿ ಹಾಗೂ ಭಜನೆ ಈ ಬಾರಿ ಕಂಡುಬರಲಿಲ್ಲ.
ಶಾಸಕರಿಂದ ಪೂಜೆ
ರಥೋತ್ಸವದ ಅಂಗವಾಗಿ ಶಾಸಕ ಅಪ್ಪಚ್ಚು ರಂಜನ್ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ರಥಕ್ಕೆ ನಮಿಸಿದರು.
ರಥಕ್ಕೆ ಚಾಲನೆ ನೀಡುತ್ತಿ ದ್ದಂತೆಯೇ ದೇಗುಲದ ಆವರಣದಲ್ಲಿ ನೆರೆದಿದ್ದ ಭಕ್ತಸಮೂಹ ರಥದ ಮೇಲೆ ಬಾಳೆ ಹಣ್ಣು ಹಾಗೂ ಜವುನಗಳನ್ನು ಎಸೆದು ಪುನೀತರಾದರು.
ಜಾತ್ರೆ - ಗೋ ಪ್ರದರ್ಶನ ರದ್ದು
ಕೋವಿಡ್ ಕಾರಣದಿಂದ ಪ್ರತೀ ವರ್ಷದ ರಥೋತ್ಸವದ ಬಳಿಕ ಹತ್ತಾರು ದಿನಗಳ ಕಾಲ ನಡೆಯುತ್ತಿದ್ದ ಜಾತ್ರೋತ್ಸವ ಹಾಗೂ ಗೋಪ್ರದರ್ಶನ ರದ್ದಾಗಿದ್ದು ಭಕ್ತರಲ್ಲಿ ನಿರಾಸೆಯನ್ನು ಮೂಡಿಸಿತು.
ಹೆಸರಾಂತ ನಟ ಪುನೀತ್ ಅಕಾಲಿಕ ಮರಣಕ್ಕೊಳಗಾದ ಸಂದರ್ಭ ಲಕ್ಷೆÆÃಪಲಕ್ಷ ಜನರು ಸೇರಲು ಇಲ್ಲದ ನಿಯಮಾವಳಿಗಳನ್ನು ಸಾಂಪ್ರದಾಯಕವಾದ ದೇವತಾ ಉತ್ಸವಗಳ ಮೇಲೇಕೆ ಸರ್ಕಾರ ಹೇರುತ್ತಿದೆ? ಎಂದು ಹಲವು ಭಕ್ತರು ಜಾತ್ರೆ ಹಾಗೂ ಗೋಪ್ರದರ್ಶನ ರದ್ದು ಮಾಡಿದ್ದಕ್ಕೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು.
ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತಾಧಿಗಳಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ಪ್ರಸಾದ ವಿನಿಯೋಗ ನಡೆಯಿತು.
ಕುಶಾಲನಗರ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ನೇತೃತ್ವದಲ್ಲಿ ಕಾರ್ಯದರ್ಶಿ ಶ್ರೀನಿವಾಸರಾವ್, ಪದಾಧಿಕಾರಿಗಳಾದ ಜಿ.ಎಲ್. ನಾಗರಾಜು, ವಿ.ಪಿ. ಶಶಿಧರ್, ಪುಂಡರೀಕಾಕ್ಷ, ಮುನಿಸ್ವಾಮಿ, ಬಾಬು, ಎಂ.ವಿ. ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.
(ವರದಿ - ಕೆ.ಎಸ್. ಮೂರ್ತಿ)