ಸೋಮವಾರಪೇಟೆ, ನ. ೨೩: ಅಕಾಲಿಕ ಮಳೆ, ಅತಿವೃಷ್ಟಿಯಿಂದಾಗಿ ನಷ್ಟಕ್ಕೊಳಗಾಗುವ ಕಾಫಿ ಬೆಳೆಗಾರರ ನೆರವಿಗೆ ಕಾಫಿ ಮಂಡಳಿ ನಿಂತಿದೆ. ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರೀನ್ ಹೌಸ್ ಹಾಗೂ ಡ್ರೆöÊಯರ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಜಿಲ್ಲೆಯ ಕಾಫಿ ಬೆಳೆಗಾರರಿಗೆ ನಷ್ಟ ಪರಿಹಾರ ಖಂಡಿತವಾಗಿಯೂ ದೊರಕಲಿದ್ದು, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಭರವಸೆ ನೀಡಿದರು.
ಅಕಾಲಿಕ ಮಳೆಯಿಂದ ಹಾನಿಗೊಳಗಾದ ಸೋಮವಾರಪೇಟೆ ತಾಲೂಕಿನ ಹಲವು ಕಾಫಿ ತೋಟಗಳನ್ನು ಪರಿಶೀಲಿಸಿ, ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.
ಕಾಫಿ ಬೆಳೆಗಾರರ ಸಮಸ್ಯೆಯನ್ನು ಖುದ್ದಾಗಿ ವೀಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕದ ಕಾಫಿ ಬೆಳೆಯುವ ಪ್ರಮುಖ ಮೂರು ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ ಬೆಳೆಗಾರರಿಗೆ ಬೆಳೆಗಳನ್ನು ಒಣಗಿಸಲು ಹೆಚ್ಚಿನ ಸಂಖ್ಯೆಯ ಗ್ರೀನ್ ಹೌಸ್-ಡ್ರೆöÊಯರ್ ನಿರ್ಮಾಣಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಕಾಫಿ ಮಂಡಳಿಯೇ ಏಕಪಕ್ಷೀಯವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಕಂದಾಯ, ಕೃಷಿ, ತೋಟಗಾರಿಕಾ ಇಲಾಖೆಯ ವರದಿಯನ್ನು ಆಧರಿಸಿ ಪರಿಹಾರವನ್ನು ನೀಡಲಾಗುವುದು. ನಿರಂತರ ಮಳೆಯಿಂದಾಗಿ ಈಗಲೂ ಫಸಲು ನಷ್ಟವಾಗಿದ್ದು, ಪುನರ್ ಸರ್ವೆ ಕಾರ್ಯ ಮಾಡಲಾಗುವುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಮಾತನಾಡಿ, ಬೆಳೆಗಾರರು ಸತತವಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಷ್ಟ ಅನುಭವಿಸುತ್ತಾ ಬಂದಿದ್ದಾರೆ. ಕಾಫಿಯ ಗುಣಮಟ್ಟವು ಕುಸಿಯುತ್ತಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಷ್ಟದ ವಾಸ್ತವಾಂಶ
(ಮೊದಲ ಪುಟದಿಂದ) ವರದಿಯನ್ನು ಸರಕಾರಕ್ಕೆ ಕಳುಹಿಸಿ ಸೂಕ್ತ ಪರಿಹಾರವನ್ನು ಒದಗಿಸುವಂತೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.
ಬೆಳೆಗಾರರಿಗೆ ಕಾಫಿ ಮಂಡಳಿಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ನಷ್ಟ ಪರಿಹಾರದಲ್ಲೂ ಬೆಳೆಗಾರರಿಗೆ ತಾರತಮ್ಯ ಮಾಡಲಾಗುತ್ತಿದೆ. ಕೆಲವು ಅತಿ ಸಣ್ಣ ರೈತರಿಗೆ ಪಹಣಿ ಪತ್ರದ ಸಮಸ್ಯೆಗಳಿಂದಾಗಿ ಸರಕಾರದ ಸಹಾಯಧನ ದೊರೆಯುತ್ತಿಲ್ಲ. ಯಂತ್ರೋಪಕರಣಗಳಿಗೆ ಸಹಾಯಧನ ಸಿಗುತ್ತಿಲ್ಲ. ಕ್ರಿಮಿನಾಶಕ ಮತ್ತು ರಸಗೊಬ್ಬರ ಕಳಪೆಯಾಗಿದ್ದು, ಬೆಳೆಗಾರರನ್ನು ವಂಚಿಸಲಾಗುತ್ತಿದೆ. ಕಾಫಿ ಒಣಗಿಸುವ ಡ್ರೆöÊಯರ್ ಯಂತ್ರಗಳನ್ನು ಸರಕಾರದಿಂದ ಸಹಾಯಧನದ ಮೂಲಕ ಒದಗಿಸಬೇಕೆಂದು ಬೆಳೆಗಾರರು ಮನವಿ ಮಾಡಿದರು.
ವೇದಿಕೆಯಲ್ಲಿ ಕೂರ್ಗ್ ಪ್ಲಾಂರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ವಿ.ಮೋಹನ್ದಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಹಾಸನ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಜಂಟಿ ನಿರ್ದೇಶಕ ಜಿ.ತಿಮ್ಮರಾಜು, ಮಡಿಕೇರಿ ಕಾಫಿ ಮಂಡಳಿ ಉಪ ನಿರ್ದೇಶಕ ಬಿ.ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.
ಇದೇ ಸಂದರ್ಭ ನಷ್ಟ ಪರಿಹಾರ ಕೋರಿಕೆ ಮತ್ತು ಬೆಳೆಗಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬೆಳೆಗಾರರು ಲಿಖಿತ ಮನವಿ ಸಲ್ಲಿಸಿದರು.
ಬೆಳೆ ಮರು ಸಮೀಕ್ಷೆ ಆರಂಭ
ಮಕ್ಕAದೂರು, ಹೊದಕಾನ, ಆವಂಡಿ, ಮುಕ್ಕೋಡ್ಲು, ಹೆಮ್ಮೆತ್ತಾಳು, ಪೊನ್ನಂಪೇಟೆ ಹೋಬಳಿಯ ಬಿ.ಶೆಟ್ಟಿಗೇರಿ, ಕೊಂಗಣ, ಕುಟ್ಟಂದಿ, ಈಚೂರು, ಮೇಕೇರಿ, ಹಾಕತ್ತೂರು, ಬಿಳಿಗೇರಿ ಮತ್ತು ಕಗ್ಗೋಡ್ಲು ಗ್ರಾಮದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದರು.
ದಕ್ಷಿಣ ಕೊಡಗಿನಲ್ಲಿ ಸಮೀಕ್ಷೆ
ಶ್ರೀಮಂಗಲ: ಅತಿವೃಷ್ಟಿಯಿಂದ ಬೆಳೆ ನಷ್ಟದ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಸರಕಾರ ಸೂಚಿಸಿರುವ ಬೆನ್ನಲ್ಲೇ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಬೆಳೆ ಹಾನಿಯ ಮರು ಸಮೀಕ್ಷೆಯನ್ನು ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಕೈಗೊಂಡಿದ್ದು, ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.
ಅತಿವೃಷ್ಟಿಯಿಂದ ಹಾನಿಯಾಗಿ ರುವ ತೋಟಗಳಿಗೆ ಪೊನ್ನಂಪೇಟೆ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಎ. ಪಿ. ಮೀರಾ, ಶ್ರೀಮಂಗಲ ಕಾಫಿ ಮಂಡಳಿ ಕಿರಿಯ ಸಂಪರ್ಕಾಧಿಕಾರಿ ಸುನಿಲ್ ಕುಮಾರ್, ಪೊನ್ನಂಪೇಟೆ ತೋಟ ಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಪ್ರಸಾದ್, ಹುದಿಕೇರಿ ಹೋಬಳಿ ಕಂದಾಯ ಗ್ರಾಮ ಲೆಕ್ಕಾಧಿಕಾರಿ ಹೆಚ್. ಸಂತೋಷ್ ಪರಿಶೀಲನೆ ಮಾಡಿದರು.
ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಮಳೆ ಆಗಿದ್ದು, ಹೆಚ್ಚಿನ ಬೆಳೆ ನಷ್ಟವಾಗಿದೆ. ಸಮೀಕ್ಷೆ ಹಾಗೂ ಪರಿಹಾರದ ಪ್ರಕ್ರಿಯೆ ವಿಳಂಬವಾಗಿರು ವುದಕ್ಕೆ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಪೊರಾಡ್ ಊರು ಪಂಚಾಯಿತಿ ಅಧ್ಯಕ್ಷ ಮಿದೇರಿರ ಮಂಜುನಾಥ್, ಕಾರ್ಯದರ್ಶಿ ಬಲ್ಯಮಿದೇರೀರ ಸಂಪತ್, ಮಿದೇರೀರ ಪೆಮ್ಮಯ್ಯ, ಬಲ್ಯಮಿದೇರಿರ ಪೊನ್ನಪ್ಪ, ವಿಜಯ ಪ್ರಸಾದ್, ಶರಣ್ ಚಂಗಪ್ಪ, ಮೋಹನ್ ಕುಮಾರ್, ಅಣ್ಣೀರ ಮಂದಯ್ಯ ಮತ್ತಿತರರು ಹಾಜರಿದ್ದು ನಷ್ಟವಾಗಿರುವ ತೋಟ, ಗದ್ದೆಗಳನ್ನು ಅಧಿಕಾರಿಗಳಿಗೆ ತೋರಿಸಿದರು.