ಮಡಿಕೇರಿ, ನ. ೨೩: ರಾಜ್ಯ ವಿಧಾನ ಪರಿಷತ್ತಿಗೆ ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ಈ ಬಾರಿ ನಡೆಯುತ್ತಿರುವ ಚುನಾವಣೆಗೆ ಸಂಬAಧಿಸಿದAತೆ ಜಿಲ್ಲೆಯಿಂದ ಒಟ್ಟು ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ. ಹಾಲಿ ಎಂಎಲ್ಸಿ ಆಗಿ ಎಂ.ಪಿ. ಸುನಿಲ್ ಸುಬ್ರಮಣಿ ಸೇರಿದಂತೆ ರಾಜ್ಯದಲ್ಲಿ ತೆರವಾಗುತ್ತಿರುವ ಒಟ್ಟು ೨೫ ಮೇಲ್ಮನೆ ಸದಸ್ಯರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಈ ಸದಸ್ಯರ ಅವಧಿ ಜನವರಿ ೫ಕ್ಕೆ ಮುಕ್ತಾಯಗೊಳ್ಳಲಿದ್ದು ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಸ್ಥಾನಕ್ಕೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದ ಇಂದು ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಪ್ರಮುಖ ಪಕ್ಷವಾದ ಬಿಜೆಪಿಯಿಂದ ಈ ಬಾರಿ ಬಿಜೆಪಿಯ ಮಾಜಿ ಜಿಲ್ಲಾ ಅಧ್ಯಕ್ಷರಾಗಿರುವ ಎಂ.ಪಿ. ಸುಜಾಕುಶಾಲಪ್ಪ ಅವರು ಅಧಿಕೃತ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ನಿAದ ಡಾ|| ಮಂಥರ್ಗೌಡ, ಜೆಡಿಎಸ್ನಿಂದ ಇಸಾಕ್ಖಾನ್ ಅವರುಗಳು ಅಭ್ಯರ್ಥಿಗಳಾಗಿದ್ದಾರೆ.
ಈ ಮೂವರು ಇಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ ಅವರಿಗೆ ನಾಮಪತ್ರ ಸಲ್ಲಿಸಿದರು.
ಇಂದಿನ ಬೆಳವಣಿಗೆ
ಬಿಜೆಪಿ ಅಭ್ಯರ್ಥಿ ಸುಜಾಕುಶಾಲಪ್ಪ ಅವರು ಪ್ರಥಮ ಅಭ್ಯರ್ಥಿಯಾಗಿ ಜಿಲ್ಲೆಯಿಂದ ಉಮೇದುವಾರಿಕೆ ಸಲ್ಲಿಸಿದರು. ಇಂದು ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ಎಂ.ಪಿ.ಸುಜಾಕುಶಾಲಪ್ಪ ಹಾಗೂ ಪಕ್ಷದ ಪ್ರಮುಖರು ನಗರದ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ವಕೀಲ ರತ್ನಾಕರ ಶೆಟ್ಟಿ ಅಭ್ಯರ್ಥಿಯೊಂದಿಗೆ ಪಾಲ್ಗೊಂಡಿದ್ದರು. ಸುಜಾಕುಶಾಲಪ್ಪ ಅವರು ಬಳಿಕ ಮತ್ತೊಂದು ನಾಮಪತ್ರವನ್ನು ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ರೀನಾ ಪ್ರಕಾಶ್ ಹಾಗೂ ನೆಲ್ಲೀರ ಚಲನ್ ಜೊತೆಯಲ್ಲಿ ಸಲ್ಲಿಸಿದರು.
೧೦೦೦ ಮತಗಳ ವಿಶ್ವಾಸ
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುಜಾಕುಶಾಲಪ್ಪ ಅವರು ತಾವು ೪೩ ವರ್ಷಗಳ ರಾಜಕೀಯ ಜೀವನದಲ್ಲಿ ಅಧಿಕಾರ ಇದ್ದರೂ, ಇಲ್ಲದಿದ್ದರೂ ಜನರಿಗೆ ಸ್ಪಂದಿಸಿ ಕೆಲಸ ಮಾಡಿದ್ದು, ಈ ಚುನಾವಣೆಯಲ್ಲಿ ಸುಮಾರು ೧೦೦೦ ಮತಗಳಿಸಿ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮ ಅಭಿವೃದ್ಧಿಯಲ್ಲಿ ಸದಸ್ಯರ ಪಾತ್ರ ಮಹತ್ವದ್ದು, ಸ್ಥಳೀಯ ನಿರ್ಣಯಗಳನ್ನು ಪರಿಷತ್ತಿನಲ್ಲಿ ಅನುಮೋದಿಸುವುದು, ಸದಸ್ಯರ ಗೌರವಧನ ಹೆಚ್ಚಳಕ್ಕೆ ಯತ್ನಿಸುವುದಾಗಿ ಹೇಳಿದ ಅವರು, ಜಿಲ್ಲೆಯ ಸಂಸದರು, ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷ ಹಾಗೂ ಕಾರ್ಯಕರ್ತರು ಸದೃಢರಾಗಿದ್ದು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಬೆಂಬಲಿಸಲಿದ್ದಾರೆ ಎಂದರು.
ನಿಶ್ಚಿAತೆಯಿAದ ಗೆಲುವು
ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಎಂಟು ನೂರರಷ್ಟು ಬಿಜೆಪಿ ಅಭ್ಯರ್ಥಿಗಳು ಇದ್ದು ನಾವು
(ಮೊದಲ ಪುಟದಿಂದ) ನಿಶ್ಚಿಂತೆಯಿAದ ಕೊಡಗಿನಲ್ಲಿ ಗೆಲುವು ಸಾಧಿಸುವುದಾಗಿ ಹೇಳಿದರು. ಸುಜಾ ಅವರು ಪಕ್ಷಕ್ಕಾಗಿ ಸಾಕಷ್ಟು ವರ್ಷಗಳಿಂದ ದುಡಿದಿದ್ದು, ಇವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದರು.
ಕೊಡಗು ಈಗಾಗಲೇ ಕಾಂಗ್ರೆಸ್ ಮುಕ್ತವಾಗಿದೆ. ಅಲ್ಲದೆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪ್ರತಿನಿಧಿಗಳೇ ಅಧಿಕವಾಗಿ ಆರಿಸಿ ಬಂದಿದ್ದಾರೆ. ಈ ಮೂಲಕ ಸ್ಥಳೀಯವಾಗಿ ಬಿಜೆಪಿಯವರಿಲ್ಲ ಎಂಬ ಪರಿಸ್ಥಿತಿ ಈಗ ಇಲ್ಲ ಎಂದವರು ಹೇಳಿದರು.
ಕಾಂಗ್ರೆಸ್ನಿAದ ಮಂಥರ್ಗೌಡ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಹೈಕಮಾಂಡ್ ಮೂಲಕ ಆಯ್ಕೆಗೊಂಡಿರುವ ಡಾಕ್ಟರ್ ಮಂಥರ್ ಗೌಡ ಅವರು ಕಾಂಗ್ರೆಸ್ ಪ್ರಮುಖರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಎಂಎಲ್ಸಿ ವೀಣಾ ಅಚ್ಚಯ್ಯ, ಪ್ರಮುಖರಾದ ಚಂದ್ರಮೌಳಿ, ಪಿ.ಸಿ. ಹಸೈನಾರ್ ಜತೆ ಮಂಥರ್ಗೌಡ ಅವರು ನಾಮಪತ್ರ ಸಲ್ಲಿಸಿದರು.
ಬದಲಾವಣೆ ಬಯಸಿದ್ದಾರೆ
ಉಮೇದುವಾರಿಕೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಂಥರ್ ಗೌಡ ಅವರು, ತಾವು ಹೊರಭಾಗದವರು ಎಂಬ ಅಭಿಪ್ರಾಯ ಬೇಡ, ಜಿಲ್ಲೆಯ ಸಂಬAಧ ತಮಗಿದ್ದು, ತಾವೂ ಇಲ್ಲಿನ ಮೊಮ್ಮಗನೇ ಆಗಿದ್ದೇನೆ. ಪಕ್ಷದ ಹಿರಿಯರು, ಕಿರಿಯರು, ಮತದಾರರ ಆಶೀರ್ವಾದ ಇದೆ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದು, ದುರಾಡಳಿತದಿಂದ ಜನರು ಬೇಸರಗೊಂಡಿದ್ದು ಬದಲಾವಣೆ ಬಯಸಿದ್ದಾರೆ. ಇದು ಮತದ ಮೂಲಕ ಪರಿವರ್ತನೆಯಾಗಲಿದೆ ಎಂದರು. ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತನಾಡಿದ ಅವರು ಕುಟುಂಬ ರಾಜಕಾರಣ ಇಲ್ಲಿಯೂ ನಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲೆಯವರು ಬಿಜೆಪಿಯನ್ನು ಗೆಲ್ಲಿಸುತ್ತಿದ್ದರೂ ವಿಧಾನಪರಿಷತ್, ವಿಧಾನಸಭೆ , ಸಂಸತ್ನಲ್ಲಿ ಯಾರೂ ದನಿ ಎತ್ತುತ್ತಿಲ್ಲ .ಇದು ಬದಲಾವಣೆಯಾಗಬೇಕೆಂದು ಜನ ಅಪೇಕ್ಷಿಸುತ್ತಿದ್ದಾರೆ. ನಗರ-ಪಟ್ಟಣ ಹೊರತುಪಡಿಸಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ರಾಜಕೀಯ ಪಕ್ಷದ ಚಿಹ್ನೆಯಿಂದ ಆರಿಸಿ ಬಂದವರಲ್ಲ. ಸದಸ್ಯರ ಮನವೊಲಿಸಿ ಅಭಿವೃದ್ಧಿಯ ಚಿಂತನೆ ಮೂಲಕ ಗೆಲುವು ಸಾಧಿಸುವುದಾಗಿ ಮಂಥರ್ ಗೌಡÀ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮನ್ನು ಹೈಕಮಾಂಡ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಎಲ್ಲರೂ ಒಂದಾಗಿ ಕೆಲಸ ನಿರ್ವಹಿಸಲಿದ್ದಾರೆ. ನೂರು ಮತದ ಗೆಲುವಾಗಲಿ ಅಥವಾ ಎರಡು ಮತದ ಅಂತರದ ಗೆಲುವಾಗಲಿ ಎರಡೂ ಒಂದೇ...ಪಕ್ಷ ಅವಕಾಶ ನೀಡಿರುವುದು ಸಂತಸ ತಂದಿದೆ. ಅಲ್ಲದೇ ರಾಜಕೀಯದಲ್ಲಿ ತಾವು ಹೊಸಮುಖ ಅಲ್ಲ ಎಂದು ಅವರು ಹೇಳಿದರು.
ಜೆಡಿಎಸ್ನಿಂದ
ಜೆಡಿಎಸ್ ಪಕ್ಷದಿಂದಲೂ ಅಭ್ಯರ್ಥಿ ಇಸಾಕ್ಖಾನ್ ನಾಮಪತ್ರ ಸಲ್ಲಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಪ್ರಮುಖರಾದ ಮನ್ಸೂರ್ಆಲಿ, ಪಾಣತ್ತಲೆ ವಿಶ್ವನಾಥ್, ಬಲ್ಲಚಂಡ ಗೌತಮ್ ಜತೆಗೂಡಿ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಾದ ತಮ್ಮನ್ನು ಪಕ್ಷ ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದೆ. ಎಂಎಲ್ಸಿ ಚುನಾವಣೆ ಅಂದರೆ ಕೋಟಿಗಟ್ಟಲೆ ಹಣಬೇಕೆಂದು ಭಯ ಹುಟ್ಟಿಸಲಾಗುತ್ತದೆ. ಆದರೆ ಜಿಲ್ಲೆಯ ಮತದಾರರು ತಮ್ಮ ಮತವನ್ನು ಮಾರಾಟ ಮಾಡಿಕೊಳ್ಳುವುದಿಲ್ಲ. ಅಭಿವೃದ್ಧಿಯ ಮಂತ್ರ ಹಾಗೂ ಹೆಚ್. ಡಿ. ಕುಮಾರಸ್ವಾಮಿ ಸಾಧನೆಯ ಆಧಾರದಲ್ಲಿ ಮತದಾರರ ಬಳಿ ಹೋಗುತ್ತೇನೆ. ಕಾಂಗ್ರೆಸ್ ಪಕ್ಷ ಎಲ್ಲಿಂದಲೋ ಅಭ್ಯರ್ಥಿಯನ್ನು ಕೊಡಗಿಗೆ ತಂದಿದೆ ಎಂದು ಅವರು ಟೀಕಿಸಿದರು. ಇದೀಗ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ತೆರೆಬಿದ್ದಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದಾರೆ.