ಮಡಿಕೇರಿ, ನ. ೨೨: ಕೊಡಗು ಗೌಡ ಸಮಾಜ ಮೈಸೂರು ಇದರ ಆಶ್ರಯದಲ್ಲಿ, ಸಮಾಜದ ಭವನದಲ್ಲಿ ನಾಡ ಹಬ್ಬ ಹುತ್ತರಿ ಆಚರಿಸಲಾಯಿತು. ನಿಗದಿತ ಮುಹೂರ್ತದಲ್ಲಿ ತಂಬಿಟ್ಟು ಪ್ರಸಾದ ವಿನಿಯೋಗ, ಸಮಾಜದ ಅಧ್ಯಕ್ಷ ತೋಟಂಬೈಲು ಮನೋಹರ್ ಅವರ ನೇತೃತ್ವದಲ್ಲಿ ಮತ್ತು ಸಮಾಜದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರ ಸಮ್ಮುಖದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ, ಸಾಂಪ್ರದಾಯಿಕವಾಗಿ ನೆರೆ ಕಟ್ಟಿ, ದುಡಿ ಹಾಡಿನೊಂದಿಗೆ ಗದ್ದೆಗೆ ತೆರಳಿ ಪಟಾಕಿ ಸಿಡಿಸಿ, ಕದಿರು ತೆಗೆದು ತಂದು, ಕದಿರು ಪೂಜೆ ನೆರವೇರಿಸಿ, ಸರ್ವರಿಗೂ ಕದಿರು ವಿತರಿಸಿ ವಿಜೃಂಭಣೆಯಿAದ ಹುತ್ತರಿ ಆಚರಿಸಲಾಯಿತು.