ಗೋಣಿಕೊಪ್ಪಲು, ನ.೨೨: ಹುದಿಕೇರಿ ಸಮೀಪ ಬೇಗೂರು ಪೂಳೆಮಾಡು ಈಶ್ವರ ದೇವಸ್ಥಾನದಲ್ಲಿ ಹುತ್ತರಿಯನ್ನು ಮಳೆಯಲ್ಲಿಯೇ ದೇವಸ್ಥಾನದ ಗದ್ದೆಯಲ್ಲಿ ಕದಿರು ತೆಗೆಯಲಾಯಿತು.

ಬೆಳಿಗ್ಗೆ ೮.೩೫ ಗಂಟೆಗೆ ಕದಿರು ತೆಗೆಯುವ ಸಮಯ ನಿಗದಿಯಾಗಿದ್ದರೂ ಮಳೆಯಿಂದಾಗಿ ಕೊಂಚ ತಡವಾಯಿತು ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬೊಳ್ಳಿಯಂಗಡ ದಾದೂ ಪೂವಯ್ಯ ತಿಳಿಸಿದರು.

ಮಳೆಯ ಕಾರಣ ಭಕ್ತಾದಿಗಳ ಸಂಖ್ಯೆ ಕಡಿಮೆಯಿದ್ದರೂ ಉತ್ಸಾಹದಿಂದ ಸಾಂಪ್ರದಾಯಿಕ ಹುತ್ತರಿ ಹಬ್ಬ ಆಚರಿಸಲಾಯಿತು. ದೇವಸ್ಥಾನದಲ್ಲಿ ಗ್ರಾಮಸ್ಥರು ಕದಿರನ್ನು ಹಾಕಿ, ನಮಿಸಿ ಹುತ್ತರಿ ತಂಬಿಟ್ಟು ಸ್ವೀಕರಿಸಿ ತಮ್ಮ ಮನೆಗೆ ತೆರಳಿದರು.

ಪೂಳೆಮಾಡು ಈಶ್ವರ ದೇವಸ್ಥಾನ ಉಪಾಧ್ಯಕ್ಷ ಮತ್ರಂಡ ರಾಜಾ ಮುತ್ತಪ್ಪ, ಖಜಾಂಚಿ ಸಿ.ರಘು,ನಾಡತಕ್ಕ ಬೈರಂಡ ಪೂಣಚ್ಚ ಮುಂತಾದ ಗ್ರಾಮದ ಹಿರಿಯರು, ಮಹಿಳೆಯರು, ಮಕ್ಕಳು, ಯುವಕ ಯುವತಿಯರು ಪಾಲ್ಗೊಂಡಿದ್ದರು.