ಚೆಟ್ಟಳ್ಳಿ, ನ. ೨೨: ಮಡಿಕೇರಿಯ ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳು ಶಾಲಾ ಪಠ್ಯವನ್ನು ಬಿಟ್ಟು ಕೊಡಗಿನ ಸಾಂಸ್ಕೃತಿಕ ಉಡುಪನ್ನು ಧರಿಸಿ ಪುತ್ತರಿ ಹಬ್ಬದ ಆಚರಣೆಯ ಕದಿರು ತೆಗೆದು ಪುತ್ತರಿ ಆಚರಣೆಯ ಸಂಭ್ರಮದಲ್ಲಿದ್ದರು. ಸಾಂಸ್ಕೃತಿಕ ಸ್ವಾಗತ ನೃತ್ಯ, ಮಕ್ಕಳ ಬೊಳಕಾಟ್, ಉಮ್ಮತಾಟ್ನಲ್ಲಿ ಸಂಭ್ರಮಿಸಿದರು. ಹಬ್ಬದ ವಿಶೇಷ ಖಾದ್ಯ ತಂಬಿಟ್ಟನ್ನು ಮಕ್ಕಳೆಲ್ಲ ಸವಿದರು.
ಶಾಲೆಯ ಕಮಿಟಿ ಕೋದಂಡ ನಿಯತಾ ದೇವಯ್ಯ, ಶಾಲಾ ಪ್ರಾಂಶುಪಾಲೆ ನಂದಿನೆರವAಡ ಸುಮಿತ್ರರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪುತ್ತರಿ ಹಬ್ಬದ ಶುಭಾಶಯ ಕೋರಿದರು. ಶಾಲಾ ವಿದ್ಯಾರ್ಥಿಯೊಬ್ಬ ಕನಕದಾಸರ ವೇಷಧರಿಸಿದ್ದು ವಿಶೇಷ ವಾಗಿತ್ತು. ಶಾಲಾ ಶಿಕ್ಷಕಿ ವಿಸ್ಮ ಕನಕಜಯಂತಿ ದಿನದ ವಿಶೇಷತೆಯ ಬಗ್ಗೆ ವಿವರಿಸಿದರು. ಈ ಸಂದರ್ಭ ಶಾಲಾ ಆಡಳಿತ ಮೇಲ್ವಿಚಾರಕ ರವಿ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
-ಕರುಣ್ ಕಾಳಯ್ಯ