ಮಡಿಕೇರಿ, ನ. ೨೨: ಮರಂದೋಡ ಗ್ರಾಮದ ಹುತ್ತರಿ ಹಬ್ಬದ ೫೦ ವರ್ಷ ಇತಿಹಾಸವಿರುವ ಈಗಲೂ ಆಚರಿಸಿಕೊಂಡು ಬರುತ್ತಿರುವ ಹಬ್ಬವು ಇಗ್ಗುತ್ತಪ್ಪಲಿನಲ್ಲಿ ಕಟ್ಟು ಬಿದ್ದ ನಂತರ ಮೂರು ದಿನ ಮುಂಚಿತವಾಗಿ ಈಡು ಮಂದ್ ನಡೆಯುತ್ತದೆ. ನಂತರ ಈಡ್ ಮಂದ್ಗೆ ಮೊಟ್ಟಗೇರಿ, ಮೇರಿಯಂಗೇರಿ, ಕಕ್ಕುಂದಗೇರಿ ಅವರ ಮನೆಯಲ್ಲಿ ಊಟ ಉಪಚಾರ ನಡೆದು ಮಂದ್ಗೆ ಬಂದು ಸಂಪ್ರದಾಯದAತೆ ಬಾಳೋಪಾಟ್ ಹಾಡಿಕೊಂಡು ಮೂರು ಕೇರಿಯಿಂದ ಬಂದು ಕೋಲಾಟ ನಡೆಯುತ್ತದೆ.
ನಂತರ ಮೂರು ಮಂದ್ಗಳ ಪೂಮೊಟ್ಟಾಣೆ, ಕೇದಾಣೆ, ಮಂದ್ಗಳಲ್ಲಿ ಕೋಲಾಟ, ಬೊಳಕಾಟ್, ಪರೆಯಕಳಿ ನಡೆಯುತ್ತದೆ. ಮನೆಪಾಟ್ ದೊಡ್ಡಮನೆಯಲ್ಲಿ ಮೇರಿಯಂಡ, ಅನ್ನಡಿಯಂಡ, ಮಾಚೇಂಡ, ನಿಡುಮಂಡ, ಬೋಯಮಾಡಂಡ ಕುಟುಂಬದಲ್ಲಿ ಊರಿನವರು ಸೇರಿ ಮನೆಪಾಟ್ ಹಾಡುತ್ತಾರೆ. ನಂತರ ಊಟ ಉಪಚಾರ ಹಾಗೂ ಕೊನೆಯದಾಗಿ ಊರೊರ್ಮೆ ನಡೆದು ಹಬ್ಬವು ಕೊನೆಗೊಳ್ಳುತ್ತದೆ.