ಕಣಿವೆ, ನ. ೨೨: ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಕುಂಟುತ್ತ ಸಾಗಿ ಬಂದ ಕುಶಾಲನಗರದ ಖಾಸಗಿ ಬಸ್ ನಿಲ್ದಾಣ ಇದೀಗ ಮೂಲ ಉದ್ದೇಶಕ್ಕೆ ಬಳಕೆಯಾಗದೇ ಅಪ್ರಯೋಜಕವಾಗುತ್ತಿದೆ.
ಕುಶಾಲನಗರ ತಾಲೂಕು ಕೇಂದ್ರದಿAದ ಜಿಲ್ಲೆಯ ವಿವಿಧೆಡೆ ಗಳಿಗೆ ಸಂಚರಿಸುವ ೩೦ ಕ್ಕೂ ಹೆಚ್ಚು ಖಾಸಗಿ ಬಸ್ಗಳು ಈ ನಿಲ್ದಾಣಕ್ಕೆ ಬರುತ್ತಲೇ ಇಲ್ಲ. ಪಟ್ಟಣದೊಳಗೆ ಹಾದು ಹೋಗಿರುವ ಮೈಸೂರು - ಬಂಟ್ವಾಳ ರಾಷ್ಟಿçÃಯ ಹೆದ್ದಾರಿ ಯಲ್ಲಿಯೇ ನಿಲುಗಡೆಯಾಗುವ ಈ ಬಸ್ಗಳು ಅಲ್ಲಿಂದಲೇ ಪ್ರಯಾಣಿಕ ರನ್ನು ಕೂಗಿ ಕರೆದು ಹತ್ತಿಸಿಕೊಂಡು ತೆರಳುವುದು ಮಾಮೂಲಿಯಾಗಿವೆ.
ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯ ಬಲ ಬದಿಯಲ್ಲಿ ಅರ್ಧ ಎಕರೆ ಹಳ್ಳ ದಂತಿದ್ದ ಜಾಗವನ್ನು ಸಮತಟ್ಟು ಮಾಡಿ ಅದರ ಸುತ್ತಲೂ ಆಳವಾದ ಅಗಲವಾದ ಚರಂಡಿಗಳನ್ನು ನಿರ್ಮಿಸಲಾಗಿತ್ತು. ಏಕಕಾಲದಲ್ಲಿ ೧೦ ರಿಂದ ೧೫ ಬಸ್ಗಳು ನಿಲುಗಡೆ ಯಾಗುವಂತಹ ಸುಸಜ್ಜಿತ ಶೆಲ್ಟರ್ ಕೂಡ ನಿರ್ಮಿಸಿ ಪ್ರಯಾಣಿಕರ ಅನುಕೂಲಕ್ಕೆ ವಿಶ್ರಾಂತಿಯ ಆಸನಗಳು, ವಿದ್ಯುತ್ ಸಂಪರ್ಕ, ಶೌಚಾಲಯ ಮತ್ತಿತರ ಸೌಲಭ್ಯ ಗಳನ್ನು ಕಲ್ಪಿಸಲಾಗಿತ್ತು. ಬಳಿಕ ವರ್ಷದ ಹಿಂದೆ ಸ್ಥಳೀಯ ಶಾಸಕ ರಿಂದ ಉದ್ಘಾಟಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಹತ್ತಾರು ತಿಂಗಳು ಕಾಲ ಖಾಸಗಿ ಬಸ್ಗಳು ರಸ್ತೆಗಿಳಿಯದ ಕಾರಣ ಈ ಬಸ್ ನಿಲ್ದಾಣ ಕಳೆಗುಂದಿತು. ಇದೀಗ ಬಸ್ಗಳ ಸಂಚಾರ ಆರಂಭವಾಗಿವೆ. ಆದರೆ, ಬಸ್ಗಳು ಕೇವಲ ಮುಖ್ಯ ರಸ್ತೆಗಾಗಿಯೇ ತೆರಳುತ್ತಿವೆ ಹೊರತು ಈ ನಿಲ್ದಾಣಕ್ಕೆ ಬರುತ್ತಲೇ ಇಲ್ಲ.
ಖಾಸಗಿ ಬಸ್ಗಳು ನಿಲ್ದಾಣಕ್ಕೆ ಸಲೀಸಾಗಿ ಬಂದು ಹೋಗಲು ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತವನ್ನು ಸುತ್ತು ಹಾಕಿ ನಿಲ್ದಾಣದತ್ತ ಸಂಪರ್ಕ ಕಲ್ಪಿಸುವ ರಸ್ತೆ ಕಿಷ್ಕಿಂದೆಯಾಗಿರುವುದು ಒಂದು ಕಾರಣವಾದರೆ, ಈ ಕಿಷ್ಕಿಂದೆಯAತಿ ರುವ ರಸ್ತೆಯ ಒಂದು ಬದಿಯಲ್ಲಿ ಅಂದರೆ ಕೆಎಸ್ಆರ್ಟಿಸಿ ನಿಲ್ದಾಣದ ತಡೆಗೋಡೆಗೆ ಹೊಂದಿಕೊAಡAತೆ ಇರುವ ಆಟೋ ನಿಲ್ದಾಣವು ಕೂಡ ಬಸ್ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಸ್ವತಃ ಚಾಲಕರೇ ಹೇಳುತ್ತಾರೆ.
ಖಾಸಗಿ ಬಸ್ ನಿಲ್ದಾಣದಲ್ಲಿ ಫುಡ್ಪಾರ್ಕ್
ಖಾಸಗಿ ಬಸ್ಸುಗಳ ಸುಗಮ ಸಂಚಾರಕ್ಕೆ ಇರುವ ಅಡ್ಡಿ ಅನಾನುಕೂಲಗಳನ್ನು ಪರಿಹರಿಸಲು ಮುಂದಾಗದ ಪಟ್ಟಣ ಪಂಚಾಯಿತಿ ಇದೀಗ ಖಾಸಗಿ ಬಸ್ ನಿಲ್ದಾಣದ ಸುಸಜ್ಜಿತ ಜಾಗದಲ್ಲಿ ‘ಫುಡ್ ಪಾರ್ಕ್’ ಆಗಿ ಪರಿವರ್ತಿಸಲು ಚಿಂತನೆ ನಡೆಸುತ್ತಿರುವ ವಿಚಾರ ‘ಶಕ್ತಿ'ಗೆ ಲಭ್ಯ ವಾಗಿದೆ. ಅಂದರೆ ಕುಶಾಲನಗರ ಪಟ್ಟಣದ ವಿವಿಧ ರಸ್ತೆಗಳ ಬದಿಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮಾರಾಟ ವಾಗುವ ಮಸಾಲೆ ಪೂರಿ, ಪಾನಿ ಪೂರಿ, ಗೋಬಿ ಮಂಚೂರಿ, ಎಗ್ ರೈಸ್, ಮೊದಲಾದ ಖಾದ್ಯಗಳ ಮಳಿಗೆಗಳನ್ನು ಒಂದೇ ಸೂರಿ ನೊಳಗೆ ತಂದು ಪಟ್ಟಣದ ಬಾಯಿ ಚಪ್ಪರಿಸುವ ಮಂದಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಪಂಚಾಯಿತಿಯ ಮುಂದಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಅವರ ಬಳಿ ಪತ್ರಿಕೆ ಪ್ರತಿಕ್ರಿಯೆ ಬಯಸಿದಾಗ ಕೊರೊನಾ ಕಾರಣದಿಂದಾಗಿ ಖಾಸಗಿ ಬಸ್ಗಳಲ್ಲಿ ಸಂಚರಿಸುವವರ ಸಂಖ್ಯೆ ಕ್ಷೀಣವಾಗಿದೆ. ಹಾಗಾಗಿ ನಾವು ನಿಲ್ದಾಣಕ್ಕೆ ಬಂದು ಖಾಲಿ ನಿಂತು ಹಾಗೆಯೇ ಹೊರಡಲು ಸಾಧ್ಯವಾಗು ತ್ತಿಲ್ಲ. ರಸ್ತೆಯ ಬದಿಯೇ ಪ್ರಯಾಣಿಕ ರನ್ನು ಹತ್ತಿಸಿಕೊಂಡು ಹೋಗುತ್ತೇವೆ ಎಂದು ಖಾಸಗಿ ಬಸ್ಗಳ ಚಾಲಕರು ಹೇಳುತ್ತಾರೆ. ಹಾಗಾಗಿ ಅಚ್ಚುಕಟ್ಟಾಗಿ ನಿರ್ಮಿಸಿ ರುವ ಖಾಸಗಿ ಬಸ್ ನಿಲ್ದಾಣ ವನ್ನು ಹಾಗೆಯೇ ಬಿಡೋದು ಬೇಡ. ಅಲ್ಲಿ ‘ಫುಡ್ ಜೋನ್’ ಮಾಡಿದರೆ ಹೇಗೆ ಎಂದು ಕೆಲವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಪಂಚಾಯಿ ತಿಯ ಸಾಮಾನ್ಯ ಸಭೆಯಲ್ಲಿ ವಿಷಯದ ಬಗ್ಗೆ ಚರ್ಚಿಸಿ ನಂತರ ನಿರ್ಧರಿಸಲಾಗುತ್ತದೆ ಎನ್ನುತ್ತಾರೆ.
-ಕೆ.ಎಸ್. ಮೂರ್ತಿ ಕುಶಾಲನಗರ.