ಗೋಣಿಕೊಪ್ಪ ವರದಿ, ನ. ೨೨: ನವೀಕರಿಸಬಹುದಾದ ಇಂಧನ ಬಳಕೆ ಪರಿಸರ ಪೂರಕ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಮೈಸೂರು ವಲಯ ಮುಖ್ಯಸ್ಥ ದಿನೇಶ್ಕುಮಾರ್ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಕೆವಿಕೆ ಮತ್ತು ಕೆಆರ್ಇಡಿ ಎಲ್ ವತಿಯಿಂದ ಆಯೋಜಿಸಿದ್ದ ಇಂಧನ ಉಳಿತಾಯ ಮತ್ತು ನೀರು ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಜಾಗೃತಿ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ವಿದ್ಯುತ್ ಉತ್ಪಾದನೆಗೆ ಪ್ರಸ್ತುತ ಪಳೆಯುಳಿಕೆ, ಮುಗಿದುಹೋಗ ಬಹುದಾದ ಸಂಪನ್ಮೂಲ ಬಳಕೆ ಮಾಡಲಾಗುತ್ತಿದೆ. ಕಲ್ಲಿದ್ದಲು, ನೈಸರ್ಗಿಕ ಅನಿಲ, ಖನಿಜ ತೈಲ ಉರಿಸಿದಾಗ ಹೆಚ್ಚು ಶಾಖ ಬಿಡುಗಡೆ ಗೊಂಡು ಕಾರ್ಬನ್ಡೈಅಕ್ಸೆಡ್ ಬಿಡುಗಡೆಗೊಳ್ಳುತ್ತಿದೆ. ಇದರಿಂದ ಜಾಗತಿಕ ತಾಪಮಾನ ಪರಿಸರದ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪರಿಸರ ಸ್ನೇಹಿ ಇಂಧನ ಉತ್ಪಾದÀನೆಗೆ ಸ್ಥಳಿಯವಾಗಿ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ, ಇಂಧನ ಮೂಲಗಳಾದ ಸೌರಶಕ್ತಿ, ಪವನ ಶಕ್ತಿ, ಜಲಶಕ್ತಿ ಬಳಸುವುದು ಸೂಕ್ತ. ಇದರಿಂದ ಮುಂದಿನ ಪೀಳಿಗೆಗೆ ಮುಗಿದು ಹೋಗಬಹುದಾದ ಇಂಧನ ಸಂಪನ್ಮೂಲ ಉಳಿಸಲು ಅವಕಾಶ ವಿದೆ ಎಂದರು.
ನೀರು ಪೋಲು ಮಾಡ ಬಾರದು. ಇದರಿಂದ ಹೆಚ್ಚು ವಿದ್ಯುತ್ ಉಳಿತಾಯ ಸಾಧ್ಯವಿದೆ. ಮನೆ ನಿರ್ವಹಣೆಗೆ ಕೂಡ ಪರಿಸರ ಸ್ನೇಹಿ ವಿದ್ಯುತ್ ಯಂತ್ರ ಬಳಸಬೇಕು ಎಂದು ಸಲಹೆ ನೀಡಿದರು.
ಕೆಆರ್ಇಡಿಎಲ್ ಕಾರ್ಯಕ್ರಮ ನಿರ್ದೇಶಕ ಪದ್ಮಯ್ಯ, ಕೆವಿಕೆ ಮುಖ್ಯಸ್ಥ ಡಾ. ಸಾಜುಜಾರ್ಜ್, ವಿಷಯ ತಜ್ಞ ಡಾ. ಪ್ರಭಾಕರ್ ಇದ್ದರು.