ಕೂಡಿಗೆ, ನ. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದ ಜೇನುಕಲ್ಲು ಬೆಟ್ಟದ ಗ್ರಾಮದಲ್ಲಿರುವ ಕಾಡು ಬಸವಣ್ಣ ನೂತನ ದೇವಾಲಯದ ಉದ್ಘಾಟನೆಯು ಮೂರು ಗ್ರಾಮಗಳ ಗ್ರಾಮಸ್ಥರ ಸಹಕಾರದೊಂದಿಗೆ ಸಡಗರ ಸಂಭ್ರಮದಿAದ ನೆರವೇರಿತು.

ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಮುಂಭಾಗದ ಕಾವೇರಿ ನದಿಯಿಂದ ನೂರಾರು ಮಹಿಳೆಯರು ಕಳಶದ ಮೂಲಕ ಗಂಗೆಯೊAದಿಗೆ ಮತ್ತು ಕಾವೇರಿ ನದಿಯಿಂದ ಬೆಳ್ಳಿ ರಥದ ಮೂಲಕ ಬಸವ ವಿಗ್ರಹವನ್ನು ಕಣಿವೆ, ಭುವನಗಿರಿ ಸೀಗೆಹೊಸೂರು ಗಂಗೆಕಲ್ಯಾಣ ಗ್ರಾಮಗಳ ಮೂಲಕ ಮೆರವಣಿಗೆ ಸಾಗಿ ನೂತನ ದೇವಾಲಯ ಸ್ಥಳಕ್ಕೆ ತಲುಪಿ ಬಸವಣ್ಣನಿಗೆ ಅಭಿಷೇಕ ಮಾಡಲಾ ಯಿತು. ನಂತರ ದೇವಾಲಯ ಆವರಣದಲ್ಲಿ ಮಹಾ ಗಣಪತಿ ಹೋಮ, ರುದ್ರ ಹೋಮ, ಪೂರ್ಣಾಹುತಿ, ಶ್ರೀ ಸ್ವಾಮಿಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ, ತೀರ್ಥ ಪ್ರಸಾದ ಬಳಿಕ ಅನ್ನಸಂತ ರ್ಪಣೆ ಕಾರ್ಯಕ್ರಮ ನೆರವೇರಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹುಣಸೂರು ಗೌಡಗೆರೆಯ ನಟರಾಜ ಸ್ವಾಮಿ ಆಶೀರ್ವಚನ ನೀಡಿದರು ಇದೇ ಸಂದರ್ಭದಲ್ಲಿ ಸಹಕಾರ ನೀಡಿದ ಗ್ರಾಮಸ್ಥರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೀಗೆಹೊಸೂರು, ಭುವನಗಿರಿ, ಜೇನುಕಲ್ಲು ಬೆಟ್ಟ, ಹಕ್ಕೆ, ಕಣಿವೆ, ಹುಲುಸೆ, ಮಾರೂರು, ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯ ನೂರಾರು ಭಕ್ತರು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಸಿ. ನಂಜುAಡ ಸ್ವಾಮಿ, ಕಾರ್ಯದರ್ಶಿ ಹೆಚ್.ಎಂ. ಬಸವರಾಜು ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.