ಮಡಿಕೇರಿ, ನ. ೨೩: ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಡಿ.೧೮, ೧೯ ಹಾಗೂ ೨೦ ರಂದು ನಾಪೋಕ್ಲು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಪುರುಷ ಹಾಗೂ ಮಹಿಳೆಯರ ವಿಭಾಗ ಪ್ರತ್ಯೇಕ ವಾಗಿರಲಿದ್ದು ಪುರುಷರ ವಿಭಾಗದಿಂದ ೧೦೦ ಹಾಗೂ ಮಹಿಳೆಯರ ವಿಭಾಗದಿಂದ ೫೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ಕುಲ್ಲೇಟಿರ ಶಂಭು ಮಾದಪ್ಪ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಅವರು ತಿಳಿಸಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಈ ಬಗ್ಗೆ ಮಾಹಿತಿ ನೀಡಿದರು.

೨೦೧೮ರಲ್ಲಿ ಕುಲ್ಲೇಟಿರ ಹಾಕಿ ಹಬ್ಬವನ್ನು ಯಶಸ್ವಿಯಾಗಿ ನಡೆಸಿ ದಾಖಲೆಯ ೩೩೪ ತಂಡಗಳು ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿತ್ತು. ಈ ಹಾಕಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಎಲ್ಲಾ ತಂಡಗಳಿಗೆ ಕೊಡವ ಸಾಂಪ್ರದಾಯಿಕ ಒಡಿ ಕತ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅದೇ ರೀತಿ ಈ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳಿಗೆ ಸಹ ಸ್ಮರಣಿಕೆ ಯನ್ನು ನೀಡಿ ಗೌರವಿಸಲಾಗುವುದು.

ಹಗ್ಗಜಗ್ಗಾಟ

(ಮೊದಲ ಪುಟದಿಂದ) ಪಂದ್ಯದಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಒಂದು ತಂಡದಲ್ಲಿ ತಲಾ ೯ (೭+೨) ಆಟಗಾರರು ಪಾಲ್ಗೊಳ್ಳಬಹು ದಾಗಿದ್ದು, ವಿಜೇತ ತಂಡಗಳಿಗೆ ನಗದು ಬಹುಮಾನ, ಟ್ರೋಫಿ ಹಾಗೂ ವೈಯಕ್ತಿಕ ಟ್ರೋಫಿ ನೀಡಲಾಗುವುದು.

೨೦೧೮ ರಲ್ಲಿ ಕುಲ್ಲೇಟಿರ ಹಾಕಿ ಹಬ್ಬದ ಸಂದರ್ಭದಲ್ಲಿ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಪಂದ್ಯಾವಳಿ, ‘ಪೊಮ್ಮಕ್ಕಡ ದಿವಸ’, ‘ಬೊಡಿ ನಮ್ಮೆ’, ‘ಆಟೋ ಎಕ್ಸೊ÷್ಪÃ’ ಕೂಡ ನಡೆಸಲು ನಿರ್ಧರಿಸಲಾಗಿತ್ತು. ಇವುಗಳಲ್ಲಿ ಹಾಕಿ ಹಬ್ಬದ ಸಂದರ್ಭ ‘ಪೊಮ್ಮಕ್ಕಡ ದಿವಸ’ ಆಚರಿಸಲಾಗಿತ್ತು. ಆದರೆ ಭಾರೀ ಮಳೆಯ ಕಾರಣದಿಂದ ಉಳಿದ ಸ್ಪರ್ಧೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ‘ಕುಲ್ಲೇಟಿರ ಕಪ್’ ಹಗ್ಗಜಗ್ಗಾಟ ಪಂದ್ಯಾವಳಿಯನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊಡಗಿನ ಎಲ್ಲಾ ಕೊಡವ ಕುಟುಂಬಗಳು ಹಾಗೂ ಕ್ರೀಡಾಭಿಮಾನಿಗಳು ಸಹಕರಿಸಬೇಕೆಂದು ಶಂಭು ಮಂದಪ್ಪ ಮನವಿ ಮಾಡಿದರು.

ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕೊಡವ ತಂಡಗಳು ಡಿ.೧೦ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ೯೪೪೮೬೪೭೩೪೩, ೯೪೪೮೬೪೭೩೨೬, ೮೧೦೫೪೯೬೩೧೮, ೯೯೮೦೦೬೦೩೧೨ ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಪಂದ್ಯಾವಳಿಯು ‘ನಾಕೌಟ್’ ಮಾದರಿಯಲ್ಲಿ ಆಯೋಜನೆಗೊಳ್ಳಲಿದ್ದು, ೧ ಕುಟುಂಬದಿAದ ೧ ತಂಡ ಭಾಗವಹಿಸಬಹುದು. ಕ್ರೀಡಾಪಟುಗಳಿಗೆ ವಯಸ್ಸಿನ ಮಿತಿ ಇರುವುದಿಲ್ಲ.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಖಜಾಂಚಿ ನಂದಾ ನಾಚಪ್ಪ, ಸಂಚಾಲಕ ಕುಲ್ಲೇಟಿರ ಬೇಬ ಅರುಣ್, ನಿರ್ದೇಶಕರಾದ ಕುಲ್ಲೇಟಿರ ಲೋಕೇಶ್ ಹಾಗೂ ಕುಲ್ಲೇಟಿರ ಶಾಂತ ಕಾಳಪ್ಪ ಉಪಸ್ಥಿತರಿದ್ದು ಮಾಹಿತಿ ನೀಡಿದರು.