*ಗೋಣಿಕೊಪ್ಪ, ನ. ೨೧: ಶಿಕ್ಷಣದಲ್ಲಿ ಮತಷ್ಟು ಪ್ರಗತಿ ಹೊಂದಲು ಶಿಕ್ಷಕರು ಸದಾ ಪೂರ್ವತಯಾರಿಯಲ್ಲಿ ಇರಬೇಕು ಎಂದು ಡಯಟ್‌ನ ಉಪನಿರ್ದೇಶಕ ಸುರೇಶ್ ಸಲಹೆ ನೀಡಿದರು.

ವೀರಾಜಪೇಟೆ ತಾಲೂಕು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೇಂದ್ರಕ್ಕೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಿದರು.

ಸಿ.ಆರ್.ಪಿ.ಗಳೊಂದಿಗೆ ಸಂವಾದ ನಡೆಸಿದ ಅವರು ಶೈಕ್ಷಣಿಕ ಪ್ರಗತಿಯ ಬಗ್ಗೆ, ಅಕ್ಷರದಾಸೋಹ, ನಿಷ್ಠ ತರಬೇತಿ, ಸಾರಿಗೆ ಭತ್ಯೆ, ಕೋವಿಡ್ ೧೯ ಚುಚ್ಚುಮದ್ದಿನ ಬಗ್ಗೆ, ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ, ಶಾಲೆ ಸಿದ್ದಿ ಪ್ರಗತಿಯ ಬಗ್ಗೆ, ಕ್ಲಸ್ಟರ್ ಕೇಂದ್ರದ ಬಲವರ್ಧನೆ ಬಗ್ಗೆ ಸಮಾಲೋಚನೆ ಸಭೆಯಲ್ಲಿ ಚರ್ಚಿಸಿದರು. ಡಯಟ್ ಹಿರಿಯ ಉಪನ್ಯಾಸಕ ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಿಗಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ಬಿ.ಆರ್.ಪಿ.ಗಳಾದ ಉತ್ತಪ್ಪ, ಗೀತಾಂಜಲಿ, ಜೈಸಿ ಜೋಸೆಫ್, ಯಲ್ಲಪ್ಪ ಪೂಜಾರಿ, ವಾಮನ, ಸಿ.ಆರ್.ಪಿ.ಗಳಾದ ವೆಂಕಟೇಶ್ ವಿ.ಟಿ., ತಿರುನೆಲ್ಲಿಮಾಡ ಜೀವನ್, ಜ್ಯೋತಿಶ್ವರಿ, ಕರುಂಬಯ್ಯ, ಪ್ರವೀಣ್, ಸುಷ, ಪುಷ್ಪಾ, ಚಿಕ್ಕದೇವಯ್ಯ, ಮುರುಗನ್, ರವಿ, ರಾಜೇಶ್ವರಿ, ಶ್ರುತಿಶ್ರೀ, ಬಿ.ಐ.ಈ. ಆರ್.ಟಿ.ಗಳಾದ ಅಜಿತ, ಕೇಶವ ಮೂರ್ತಿ, ಕಾವೇರಮ್ಮ, ಸುದಿನ, ಕುಸುಮ ಪಾಲ್ಗೊಂಡಿದ್ದರು