ನಾಪೆೆÇÃಕ್ಲು, ನ. ೨೧: ಸ್ಥಳೀಯ ಕೆನರಾ ಬ್ಯಾಂಕ್ನಲ್ಲಿ ಬ್ಯಾಂಕಿನ ಸಂಸ್ಥಾಪಕರಾದ ಅಂಬಳೆ ಸುಬ್ಬರಾವ್ ಪೈ ರವರ ೧೧೬ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಬ್ಯಾಂಕಿನ ಉಪ ವ್ಯವಸ್ಥಾಪಕಿ ಫೌಸೀಯ, ಸಿಬ್ಬಂದಿಯವರಾದ ಉಬೈದ್, ಪ್ರವೀಣ್, ಅಂಜನ್, ಪೌಲೋಸ್, ದೇವಪ್ಪ, ಸುಧಾ ಮತ್ತಿತರರು ಇದ್ದರು.
ಕೂಡಿಗೆ: ಕೂಡಿಗೆ ಕೆನರಾ ಬ್ಯಾಂಕ್ ವತಿಯಿಂದ ಬ್ಯಾಂಕ್ನ ಸಂಸ್ಥಾಪಕ ಅಂಬಳೆ ಸುಬ್ಬರಾವ್ ಪೈ ಅವರ ೧೧೬ನೇ ಸಂಸ್ಥಾಪಕರ ದಿನಾಚರಣೆಯನ್ನು ಬ್ಯಾಂಕ್ ಸಭಾಂಗಣದಲ್ಲಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ನೆರವೇರಿಸಿದರು. ಈ ಸಂದರ್ಭ ಬ್ಯಾಂಕ್ನ ವ್ಯವಸ್ಥಾಪಕ ದೀಪಕ್ ಕುಮಾರ್, ಕುಶಾಲನಗರ ಆರ್.ಎಂ.ಸಿ. ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಬ್ಯಾಂಕ್ ಅಧಿಕಾರಿ ಬೀನುಬಾಬು, ಕೌಶಿಕ್, ಹೆಚ್.ಪಿ. ಶಿವಕುಮಾರ್, ಶೇಷಪ್ಪ, ಮಹೇಂದ್ರ, ಉಮಾವತಿ, ಪಾಲಾಕ್ಷ, ಸುಮಾವತಿ, ಬಿ.ಡಿ. ಅಣ್ಣಯ್ಯ, ಹರ್ಷ ಮೊದಲಾದವರು ಹಾಜರಿದ್ದರು.