ಸೋಮವಾರಪೇಟೆ, ನ. ೧೯: ಸಮೀಪದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮನೆಯಲ್ಲೇ ಬೆಳೆದ ತರಕಾರಿ, ಹಣ್ಣು-ಹಂಪಲು ಹಾಗೂ ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡಿದರು. ಪೋಷಕರು, ಶಿಕ್ಷಕರುಗಳು ತಾಜಾ ತರಕಾರಿಯನ್ನು ಮಕ್ಕಳು ನಿಗದಿಪಡಿಸಿದ ಹಣವನ್ನು ತೆತ್ತು ಖರೀದಿ ಮಾಡಿದರು.
ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಪ್ರಭಾರ ಮುಖ್ಯ ಶಿಕ್ಷಕಿ ಎಸ್.ಎಂ. ಆಶಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಆರ್. ಸತೀಶ್, ಶಿಕ್ಷಕರಾದ ಶಿವಶಂಕರ್, ಅಭಿದಾಭಾನು, ಎನ್.ಹೆಚ್. ಮೋಹನ್ ಕುಮಾರಿ, ಗಿರಿಗೌಡ ಇದ್ದರು.