ಭಾಗಮಂಡಲ, ನ. ೧೯: ತುಲಾಸಂಕ್ರಮಣದ ಪ್ರಯುಕ್ತ ಕಳೆದ ಅಕ್ಟೋಬರ್ ೧೫ರಂದು ಭಾಗಮಂಡಲ ದಿಂದ ತಲಕಾವೇರಿಗೆ ಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣ ಗಳನ್ನು ಕೊಂಡೊಯ್ಯಲಾಗಿತ್ತು. ತಕ್ಕರಾದ ಕೋಡಿ ಮೋಟಯ್ಯ ಕಾರ್ಯನಿರ್ವಹಣಾಧಿಕಾರಿ ಅವರಿಂದ ಆಭರಣಗಳನ್ನು ಪಡೆದು ತಲಕಾವೇರಿಯಲ್ಲಿ ಮಾತೆಗೆ ತೊಡಿಸಲಾಗಿತ್ತು. ಕಿರುಸಂಕ್ರಮಣ ವಾದ ತಾ. ೧೬ ರವರೆಗೆ ಕಾವೇರಿ ಕುಂಡಿಕೆಯಲ್ಲಿ ಆಭರಣ ಹಾಗೂ ಬೆಳ್ಳಿಯ ಕವಚಗಳನ್ನು ತೊಡಿಸಲಾಗಿತ್ತು. ಸಂಕ್ರಮಣ ಮುಗಿದ ಬಳಿಕ ಭಂಡಾರವನ್ನು ತರಲಾಯಿತು. ಬಳಿಕ ಹುಂಡಿ ಎಣಿಕೆ ಮಾಡಲಾಯಿತು. ತಲಕಾವೇರಿ ಮತ್ತು ಭಾಗಮಂಡಲ ಎರಡೂ ಕ್ಷೇತ್ರಗಳಲ್ಲಿ ೨೩ ದಿನಗಳಲ್ಲಿ ರೂ. ೯ ಲಕ್ಷದ ೪೫೦ ಕಾಣಿಗೆ ಸಂಗ್ರಹವಾಗಿದೆ. ಭಾಗಮಂಡಲದಲ್ಲಿ ಒಂದು ತಿಂಗಳ ಕಾಲ ನಂದಾದೀಪವನ್ನು ಇರಿಸಲಾಗಿದೆ. ಅಕ್ಷಯ ಪಾತ್ರೆಯನ್ನು ಇರಿಸಲಾಗಿದ್ದು ಸಾಂಪ್ರದಾಯಿಕ ಆಚರಣೆ ಸಮಾಪ್ತಿಗೊಂಡಿದೆ.

- ಸುನಿಲ್