ಶನಿವಾರಸಂತೆ, ನ. ೧೯: ಸಮೀಪದ ದುಂಡಳ್ಳಿ ಗಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅಂಗನವಾಡಿ ಸಹಭಾಗಿತ್ವದಲ್ಲಿ ಗ್ರಂಥಾಲಯ ಸಪ್ತಾಹ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಮೇಲ್ವಿಚಾರಕಿ ಎನ್.ಪಿ. ದಿವ್ಯಾ ಉದ್ಘಾಟಿಸಿದರು. ಓದುವ ಬೆಳಕು ಯೋಜನೆಯಡಿ ಗ್ರಂಥಾಲಯಕ್ಕೆ ಮಕ್ಕಳನ್ನು ಸದಸ್ಯರಾಗಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಾಯಿತು. ಅಂಚೆ ಅಧಿಕಾರಿ ತಮ್ಮೇಗೌಡ ಮಾತನಾಡಿ, ಮಕ್ಕಳು ಪಠ್ಯವಲ್ಲದೇ ಇತರ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆಯಲ್ಲಿ ಪುಸ್ತಕಗಳೂ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಅಂಗನವಾಡಿ ಕಾರ್ಯಕರ್ತೆ ಭವಾನಿ ಬಾಲ ವಿಕಾಸ ಸಮಿತಿ ಸದಸ್ಯೆ ಭವಾನಿ, ಗೌರಿ, ಪ್ರಿಯಾ, ಪದ್ಮಮ್ಮ, ಸಚಿನ್, ಶೇಖರ್, ಅನುಷಾ, ಜಯಮ್ಮ ಹಾಜರಿದ್ದರು.