ಸೋಮವಾರಪೇಟೆ, ನ.೧೯: ಅನ್ಯಕೋಮಿನ ಯುವತಿಗೆ ಬುರ್ಕಾ ನೀಡಿದ ಘಟನೆಗೆ ಸಂಬAಧಿಸಿದAತೆ ಯುವತಿಯರನ್ನು ಪ್ರಶ್ನಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೇ ಘಟನೆಗೆ ಸಂಬAಧಿಸಿದAತೆ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಈರ್ವರು ವಿದ್ಯಾರ್ಥಿನಿಯರ ಬುರ್ಕಾ ಎಳೆದಾಡಿ ಹಲ್ಲೆ ನಡೆಸಿದ ಆರೋಪದ ಮೇರೆ ದೊರೆತ ದೂರಿಗೆ ಸಂಬAಧಿಸಿ ದಂತೆ ಶನಿವಾರಸಂತೆ ಪೊಲೀಸರು ಈರ್ವರು ಯುವಕರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಿಡಿಗಳಲೆಯ ಪ್ರಜ್ವಲ್ ಹಾಗೂ

(ಮೊದಲ ಪುಟದಿಂದ) ಸುಳುಗಳಲೆಯ ಕೌಶಿಕ್ ಬಂಧಿತರು.

ಘಟನೆಯ ವಿವರ: ಈರ್ವರು ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ನಿನ್ನೆ ದಿನ ಅನ್ಯ ಕೋಮಿಗೆ ಸೇರಿದ ವಿದ್ಯಾರ್ಥಿನಿಗೆ, ಓರ್ವ ಯುವತಿ ತನ್ನ ಬುರ್ಕಾವನ್ನು ನೀಡಿದ್ದಾಳೆ.

ಬುರ್ಕಾವನ್ನು ಪಡೆದ ವಿದ್ಯಾರ್ಥಿನಿ ಕಾಲೇಜಿಗೆ ಆಗಮಿಸದೇ ಇರುವುದರಿಂದ, ಸಂಜೆ ವೇಳೆಗೆ ಬುರ್ಕಾವನ್ನು ವಾಪಸ್ ಕೇಳಲು ತನ್ನ ಸ್ನೇಹಿತನನ್ನು ಆಕೆಯ ಮನೆಗೆ ಕಳುಹಿಸಿದ್ದಾಳೆ. ಆತ ಬುರ್ಕಾವನ್ನು ವಾಪಸ್ ತರುತ್ತಿದ್ದಂತೆ ಹೊಸೂರಿನ ಮದನ್, ಶನಿವಾರಸಂತೆ ನಿವಾಸಿ ತನ್ಮಯ್ ಸೇರಿದಂತೆ ೩೦ ರಿಂದ ೪೦ ಮಂದಿಯ ಗುಂಪು ಆತನನ್ನು ತಡೆದಿದ್ದು, ಬುರ್ಕಾ ನೀಡಿದ ವಿದ್ಯಾರ್ಥಿನಿಯರನ್ನು ಸಾಕಷ್ಟು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸಂದರ್ಭ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದ್ದು, ಈರ್ವರು ವಿದ್ಯಾರ್ಥಿನಿಯರು ಕೊಡ್ಲಿಪೇಟೆ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಘಟನೆಗೆ ಸಂಬAಧಿಸಿದAತೆ ವಿದ್ಯಾರ್ಥಿನಿಯ ತಂದೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೆನ್ನೆ ಹಾಗೂ ಭುಜಕ್ಕೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಅದರಂತೆ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ.

ಆರೋಪಿಗಳನ್ನು ಬಂಧಿಸಿರುವ ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ನೇತೃತ್ವದ ತಂಡ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ಈರ್ವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.