ಮಡಿಕೇರಿ, ನ. ೧೯: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಕೊಡಗು ಜಿಲ್ಲೆಯಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಿರಿಯ ಮುಖಂಡ ಮಂಡೇಪAಡ ಸುಜಾ ಕುಶಾಲಪ್ಪ ಸ್ಪರ್ಧೆ ಖಚಿತಗೊಂಡಿದೆ.
ಈ ಬಗ್ಗೆ ಬಿಜೆಪಿ ಕೇಂದ್ರೀಯ ಕಾರ್ಯಾಲಯ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಿದ್ದು, ಕೊಡಗಿನಿಂದ ಸುಜಾ ಕುಶಾಲಪ್ಪ ಹೆಸರನ್ನು ಅಂತಿಮಗೊಳಿಸಿ ಆದೇಶಿಸಿದೆ. ಕಳೆದ ಬಾರಿ ಕೊನೆಘಳಿಗೆಯಲ್ಲಿ ಎಂಎಲ್ಸಿ ಚುನಾವಣೆ ಟಿಕೆಟ್ ವಂಚಿತರಾಗಿದ್ದ ಸುಜಾ, ಈ ಬಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಿಂದ ಚುನಾವಣೆ ಎದುರಿಸಲಿರುವ ಮೊದಲ ಅಭ್ಯರ್ಥಿ ಹೆಸರು ಘೋಷಣೆಯಾಗಿದೆ.