ಶ್ರೀಮAಗಲ, ನ. ೧೯: ಯುನೈಟೆಡ್ ಕೊಡವ ಆರ್ಗನೈ ಜೇಷನ್-ಯುಕೊ ಸಂಘಟನೆ ಸರ್ಕಾರದ ಮುಂದಿಟ್ಟಿರುವ "ಕೊಡವ ಜನಾಂಗ ಅಭಿವೃದ್ಧಿ ನಿಗಮ" ಬೇಡಿಕೆಗೆ ಕೊಡವ ರೈಡರ್ಸ್ ಕ್ಲಬ್ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಕ್ಲಬ್‌ನ ಸ್ಥಾಪಕಾಧ್ಯಕ್ಷ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ ತಿಳಿಸಿದ್ದಾರೆ.

ಇತ್ತೀಚೆಗೆ ಗೋಣಿಕೊಪ್ಪದ ಖಾಸಗಿ ಹೊಟೇಲಿನಲ್ಲಿ ನಡೆದ ಕ್ಲಬ್ ಪದಾಧಿಕಾರಿಗಳ ಸಭೆಯಲ್ಲಿ ಕೊಡವ ಜನಾಂಗ ಅಭಿವೃದ್ಧಿ ನಿಗಮ ಕುರಿತು ಯುಕೊ ಸಂಘಟನೆ ಅಧ್ಯಕ್ಷ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ಸುದೀರ್ಘ ಮಾಹಿತಿಯನ್ನು ನೀಡಿದ ನಂತರ ಮಾತನಾಡಿದ ಪೃಥ್ವಿ ಸುಬ್ಬಯ್ಯ, ಕೊಡವರ ಅಸ್ತಿತ್ವವನ್ನು ಉಳಿಸಿ ಬೆಳೆಸಲು ಈಗಿನ ಪರಿಸ್ಥಿತಿಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆಯ ಅವಶ್ಯಕತೆ ಖಂಡಿತಾ ಇದೆ. ಈ ನಿಟ್ಟಿನಲ್ಲಿ ಸಂದರ್ಭೋ ಚಿತವಾಗಿ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿ ಹೋರಾಟವನ್ನು ರೂಪಿಸಿದ ಯುಕೊ ಸಂಘಟನಗೆ ಸಮಸ್ತ ಕೊಡವರ ಬೆಂಬಲವಿದೆ ಎಂದರು.

ರೈಡರ್ಸ್ ಕ್ಲಬ್‌ನ ಮಹಿಳಾ ರೈಡರ್ ಮುರುವಂಡ ಸುಮಾ ಕುಟ್ಟಪ್ಪ ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಂಜು ಚಿಣ್ಣಪ್ಪ, ಕೊಡವರಿಗೆ ಬಲಿಷ್ಠವಾದ ರಾಜಕೀಯ ಲಾಬಿಯೂ ಇಲ್ಲದಿರುವಾಗ ಕೊಡವರ ಸಮಗ್ರ ಅಭಿವೃದ್ಧಿಗಾಗಿ "ಕೊಡವ ಜನಾಂಗ ಅಭಿವೃದ್ಧಿ ನಿಗಮ" ಸ್ಥಾಪನೆಯಾಗಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ, ರೈಡರ್ಸ್ ಕ್ಲಬ್‌ನ ಪದಾಧಿಕಾರಿ ಗಳಾದ ಸಣ್ಣುವಂಡ ದರ್ಶನ್ ಕಾವೇರಪ್ಪ, ಗುಡಿಯಂಗಡ ಲಿಕಿನ್ ಬೋಪಣ್ಣ, ಯುಕೊ ಸದಸ್ಯ ಹಾಗೂ ವಕೀಲ ನೆಲ್ಲಮಕ್ಕಡ ಮಾದಯ್ಯ ಉಪಸ್ಥಿತರಿದ್ದರು.