ಮಡಿಕೇರಿ, ನ. ೧೯: ಅರೆಭಾಷೆ ಅಕಾಡೆಮಿ ಸದಸ್ಯೆ, ಸಾಹಿತಿ ಸ್ಮಿತಾ ಅಮೃತರಾಜ್ ಅವರಿಗೆ ೨೦೨೦ನೇ ಸಾಲಿನ ಕಾವ್ಯ ಮಾಣಿಕ್ಷ ರಾಜ್ಯ ಪ್ರಶಸ್ತಿ ದೊರೆತಿದೆ.
ಸ್ಮಿತಾ ಅಮೃತರಾಜ್ ಬರೆದಿರುವ ಕವನ ‘ ಮಾತು ಮೀಟಿ ಹೋಗುವ ಮುನ್ನ’ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿ ರೂ. ಮೂರು ಸಾವಿರ ನಗದು ಹಾಗೂ ಸನ್ಮಾನ ಒಳಗೊಂಡಿದೆ. ಜೊತೆಗೆ ಸ್ಮಿತಾ ಅವರು ಬರೆದಿರುವ ‘ಭಾವಚಿತ್ರಗಳ ಭಾವನಾ ಲೋಕದಲ್ಲಿ’ ಬರಹವು ಬಿ.ಎ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಕ್ಕೂ ಆಯ್ಕೆಯಾಗಿದೆ.