ಸೀಗೆಹೊಸೂರು ಸಮೀಪದ ಭುವನಗಿರಿ ಗ್ರಾಮದಲ್ಲಿ ಶ್ರೀ ಕಾಡು ಬಸವಣ್ಣ ದೇವರ ವಿಗ್ರಹ ಉದ್ಭವಗೊಂಡು ಬಸವಣ್ಣ ದೇವರ ರೂಪದಲ್ಲಿ ಮೂಡಿದೆ. ಅಲ್ಲಿನ ಜೇನುಕಲ್ಲು ಬೆಟ್ಟದ ಬಳಿ ಜಗಳಗಂಟಿ ಮರ ಹಾಗೂ ಗಣಗಲೆ ಹೂವಿನ ಮರದ ಮಧ್ಯೆ ಸಣ್ಣ ಕಲ್ಲು ಬಂಡೆಯ ಮಧ್ಯ ಭಾಗದಲ್ಲಿ ಕಂಡುಬAದಿರುವ ಈ ಪುರಾತನ ಮೂರ್ತಿಯನ್ನು ಊರ ಜನರು ಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ. ಇದರಿಂದಾಗಿ ಜಮೀನಿನ ಬೆಳೆ ಯಶಸ್ವಿಯಾಗಿದೆ ಎಂದು ಊರ ಜನರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಂದಿನಿAದ ಈ ವಿಗ್ರಹವು ವರ್ಷ ಕಳೆದಂತೆ ದೊಡ್ಡದಾಗಿ ಬೆಳೆಯುತ್ತಾ ಬಂದಿದೆ. ಬಸವಣ್ಣನ ವಿಗ್ರಹವನ್ನು ಸುತ್ತಮುತ್ತಲಿನ ಎಂಟು ಗ್ರಾಮಗಳ ರೈತರು ವರ್ಷಂಪ್ರತಿ ಬಸವ ಜಯಂತಿಯ ದಿನ ಹಾಗೂ ಯುಗಾದಿ ಹಬ್ಬದ ದಿನ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬರುತ್ತಿದ್ದಾರೆ.
ಈ ಸ್ಥಳವು ಒಂದು ಕಲ್ಲು ಬಂಡೆಯ ಸುತ್ತ ಇದ್ದು, ಅದರ ಮಧ್ಯ ಬಸವನನ್ನು ಹೋಲುವ ಸಂಪೂರ್ಣ ಆಕಾರವಿದ್ದು, ಇದಕ್ಕೆ ಎರಡೂ ಮರಗಳ ಆಶ್ರಯವಿದ್ದರೂ ಸಹ ಭಾರಿ ಗಾಳಿ-ಮಳೆಗೆ ಒಂದು ಮರ ಮುರಿದು ಬಾಗಿದಂತಿದೆ. ಅದರ ಕೊಂಬೆಗಳು ಆಲದ ಮರದ ರೀತಿಯಲ್ಲಿ ಮೂರ್ತಿಗೆ ಚಪ್ಪರದಂತೆ ನೆರಳು ನೀಡುತ್ತಿದೆ. ಇದು ಕೆತ್ತನೆಯ ವಿಗ್ರಹ ಅಲ್ಲ.
ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿ ಪೂಜಾ ಕಾರ್ಯವನ್ನು ಮುಂದುವರೆಸುತ್ತಿದ್ದೇವೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ನಂಜುAಡ ಸ್ವಾಮಿ ತಿಳಿಸಿದರು.
ಅಲ್ಲದೆ ಈ ವ್ಯಾಪ್ತಿಯ ಗ್ರಾಮಗಳಾದ ಸೀಗೆಹೊಸೂರು, ಭುವನಗಿರಿ, ಜೇನುಕಲ್ಲು ಬೆಟ್ಟ, ಗಂಗೆಕಲ್ಯಾಣ, ಕಣಿವೆ, ಹುಲುಸೆ, ಮಲ್ಲೇನಹಳ್ಳಿ ಗ್ರಾಮಗಳ ರೈತರು ವರ್ಷಾರಂಭದ ದಿನದಂದು ಭೂಮಿಗೆ ಹೊನ್ನಾರು ಕಟ್ಟಿ ಉಳುಮೆ ಮಾಡುವ ಮೊದಲು ಬಸವಣ್ಣನಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಜಮೀನಿನಲ್ಲಿ ಉಳುಮೆ ಪ್ರಾರಂಭ ಮಾಡುತ್ತಾರೆ. ಬೆಳೆದ ಬೆಳೆ ಧಾನ್ಯಾದಿಗಳನ್ನು ಮೊದಲು ದೇವರಿಗೆ ಅರ್ಪಿಸುತ್ತಾರೆ. ಪ್ರಮುಖವಾಗಿ ಗ್ರಾಮದಲ್ಲಿರುವ ರೈತರ ಹಸು ಕರು ಹಾಕಿದಾಗ ಹಸುವಿನ ಗಿಣ್ಣು ಅನ್ನು ದೇವರಿಗೆ ಸಮರ್ಪಿಸಿಕೊಂಡು ಬರುತ್ತಿದ್ದಾರೆ. ಈ ಎಲ್ಲ ಪದ್ಧತಿಗಳು ಇಂದಿಗೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದೆ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದAತೆ ದೇವರ ಅನುಗ್ರಹ ಇರುವುದರಿಂದ ಈ ವ್ಯಾಪ್ತಿಯ ರೈತರು ನಂಬಿಕೆಗೆ ಪೂರಕವಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಅಧ್ಯಕ್ಷರು ಹೇಳಿದರು.
ಗ್ರಾಮಸ್ಥರ ಆಶಯದಂತೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಭಕ್ತಾದಿಗಳ ಸಹಕಾರ ದೊಂದಿಗೆ ಕೈಗೊಂಡಿರುತ್ತೇವೆ. ಬಂಡೆಯ ಸುತ್ತ ಉತ್ತಮವಾಗಿ ನೆರಳು ಆಗಲು ಸಣ್ಣ ಪ್ರಮಾಣದ ಶೀಟ್ ಹಾಕಲಾಗುತ್ತಿದೆ.
ಈ ದೇವರ ಕಾರ್ಯದಲ್ಲಿ ನಮ್ಮ ಗ್ರಾಮ ಮತ್ತು ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಧ್ಯಕ್ಷ ಕೆ.ಸಿ. ನಂಜುAಡ ಸ್ವಾಮಿ ಮನವಿ ಮಾಡಿಕೊಂಡಿರುತ್ತಾರೆ.
ಈ ದೇಗುಲದ ಅಭಿವೃದ್ಧಿಗೆ ಭಕ್ತ ಜನರು ಸಹಕರಿಸುವಂತೆ ಸಮಿತಿಯ ಅಧ್ಯಕ್ಷರು ಕೋರಿ ಕೊಂಡಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.